ಕರ್ನಾಟಕ

karnataka

ETV Bharat / state

ಲೋಕಕಲ್ಯಾಣಕ್ಕಾಗಿ ಸಂಸದರಿಂದ ಚಂಡಿಕಾ ಹೋಮ - ಕೊಪ್ಪಳ ಸುದ್ದಿ

ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಕುಟುಂಬದವರು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಸಿದರು,

Chandika homa Conducted  For  MP
ಲೋಕಕಲ್ಯಾಣಕ್ಕಾಗಿ ಸಂಸದರಿಂದ ಚಂಡಿಕಾ ಹೋಮ

By

Published : Dec 20, 2019, 4:39 PM IST

ಕೊಪ್ಪಳ : ಲೋಕಕಲ್ಯಾಣಕ್ಕಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಕುಟುಂಬದವರು ಚಂಡಿಕಾ ಹೋಮ ನಡೆಸಿದರು.

ತಾಲೂಕಿನ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಸಿದರು, ಶೃಂಗೇರಿ ಹಾಗೂ ಉಡುಪಿಯ ಪ್ರವೀಣ್ ತಂತ್ರಿ ಹಾಗೂ ಕೃಷ್ಣ ಮೂರ್ತಿ ಗಣಪಾಟಿ ಅವರ ನೇತೃತ್ವದಲ್ಲಿ ಚಂಡಿಕಾ‌ ಹೋಮ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿತು‌.

ಲೋಕಕಲ್ಯಾಣಕ್ಕಾಗಿ ಸಂಸದರಿಂದ ಚಂಡಿಕಾ ಹೋಮ

ಸಂಗಣ್ಣ ಕರಡಿ ಕುಟುಂಬದಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸದರ ಕುಟುಂಬದವರು ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ನಡೆಸುವ ಸಂಕಲ್ಪ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚಂಡಿಕಾ ಹೋಮ ಮಾಡಿಸಲಾಯಿತು ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಈಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ, ಇಂತಹ ಸನ್ನಿವೇಶ, ಸ್ಥಿತಿಗಳೆಲ್ಲವೂ ನಿವಾರಣೆಯಾಗಿ ಶಾಂತಿ‌ ನೆಲೆಸಲಿ ಎಂಬ ಉದ್ದೇಶದಿಂದ ಸಂಸದರು ಇಂದು ಚಂಡಿಕಾ ಹೋಮ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ABOUT THE AUTHOR

...view details