ಗಂಗಾವತಿ: ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಗಳ ನಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರಟಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚಿರನೂತನ ಮಹಿಳಾ ಸಂಘಟನೆಯಿಂದ ಪೊಲೀಸರಿಗೆ ಹೂ ನೀಡಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಪೊಲೀಸರಿಗೆ ಗುಲಾಬಿ ಕೊಟ್ಟು, ಸಿಹಿ ಹಂಚಿ ಸಂಭ್ರಮಿಸಿದ ಮಹಿಳೆಯರು - rapists encounter in hyderabad
ಹೈದಾರಾಬಾದ್ ಪಶು ವೈದ್ಯೆ ಮೇಲೆ ನಡೆಸಿದ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸ್ ಇಲಾಖೆ ನಡೆಗೆ ಎಲ್ಲೆಡೆ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ.
ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಸಂಭ್ರಮ
ಅತ್ಯಾಚಾರ ಆರೋಪಿಗಳಿಗೆ ಇಂತಹ ಕ್ರೂರ ಶಿಕ್ಷೆ ವಿಧಿಸುವ ಮೂಲಕ, ಅಪರಾಧ ಎಸಗುವ ಪ್ರತಿಯೊಬ್ಬರಿಗೂ ಭಯ ಹುಟ್ಟಿಸಬೇಕು ಎಂದು ಸಂಘದ ಅಧ್ಯಕ್ಷೆ ಸೌಮ್ಯ ಕದಗಲ್ ಹೇಳಿದ್ರು.