ಗಂಗಾವತಿ:ತುಂಗಭದ್ರಾ ಡ್ಯಾಂನ ಕಾಲುವೆಯಿಂದ 200 ಮೀಟರ್ ಅಂತರದಲ್ಲಿ ಕೆರೆ ಮಾಡಿಕೊಂಡಿದ್ದರೆ ಅಂತಹ ಪ್ರಕರಣಗಳನ್ನು ಗುರುತಿಸಿ ರೈತರ ಮೇಲೆ ಪ್ರಕರಣ ದಾಖಲಿಸಿ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತುಂಗಭದ್ರಾ ಜಲಾಶಯದ ಮುಖ್ಯ ಎಂಜಿನಿಯರ್ ಮಂಜಪ್ಪ ಸೂಚನೆ ನೀಡಿದರು.
ಟಿಬಿ ಡ್ಯಾಂ ಕಾಲುವೆಯಿಂದ 200 ಮೀಟರ್ ಅಂತರದಲ್ಲಿ ಕೆರೆ ಮಾಡಿದ ರೈತರ ವಿರುದ್ಧ ಕೇಸ್: ಸಿಇ ಆದೇಶ - ಕೊಪ್ಪಳ ಜಿಲ್ಲೆಯ ಕಾರಟಗಿ
ತುಂಗಭದ್ರಾ ಡ್ಯಾಂನ ಕಾಲುವೆಯಿಂದ 200 ಮೀಟರ್ ಅಂತರದಲ್ಲಿ ಕೆರೆ ಮಾಡಿಕೊಂಡಿರುವ ರೈತರ ಮೇಲೆ ಪ್ರಕರಣ ದಾಖಲಿಸಿ ಎಂದು ಸಿಇ ಮಂಜಪ್ಪ, ರೈತರ ದೂರಿನ ಮೇರೆಗೆ ಆದೇಶ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕೊನೆಯ ಭಾಗಕ್ಕೆ ನೀರು ಸಿಗುತ್ತಿಲ್ಲ ಎಂಬ ರೈತರ ದೂರಿನ ಹಿನ್ನೆಲೆ ಭಾನುವಾರ ಖುದ್ದು ಭೇಟಿ ನೀಡಿದ ಸಿಇ ಮಂಜಪ್ಪ, ರೈತರ ಹೊಲಗಳಿಗೆ ತೆರಳಿ ವಸ್ತುಸ್ಥಿತಿ ಪರಿಶೀಲಿಸಿದರು. ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
31ನೇ ವಿತರಣ ಕಾಲುವೆಯಿಂದ ಒಟ್ಟು 280 ಕ್ಯೂಸೆಕ್ ನೀರನ್ನು 28 ಕಿ.ಮೀ. ಹರಿಸಬೇಕು. ಆದರೆ ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಕಬಳಿಸುತ್ತಿರುವುದರಿಂದ ಟೇಲ್ಯಾಂಡ್ ಭಾಗದ ರೈತರಿಗೆ ಸಮಸ್ಯೆಯಾಗಿದೆ ಎಂದು ಸಿಇ ಬಳಿ ರೈತರು ಹೇಳಿದ್ದಾರೆ. ಹೀಗಾಗಿ ಕಾಲುವೆಯಿಂದ 200 ಮೀಟರ್ ಅಂತರದಲ್ಲಿ ಕೆರೆ ಮಾಡಿಕೊಂಡಿರುವ ರೈತರ ಮೇಲೆ ಪ್ರಕರಣ ದಾಖಲಿಸಿ ಎಂದು ಅವರು ಆದೇಶ ನೀಡಿದ್ದಾರೆ.