ಕರ್ನಾಟಕ

karnataka

ETV Bharat / state

ಕಾಡಾ ಪ್ರಾಧಿಕಾರದ ಅಧ್ಯಕ್ಷನ ಮೇಲೆ ಜಾತಿನಿಂದನೆ ಪ್ರಕರಣ ದಾಖಲು

ತಳ ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ವಕೀಲ ತಿಪ್ಪೇರುದ್ರಸ್ವಾಮಿ ಮತ್ತು ಪರಮೇಶ್ವರ ಗೌಡ ಬೂದಗುಂಪಾ ಎಂಬುವವರ ಮೇಲೆ ಕಾರಟಗಿ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ.

caste abuse case filed  in gangvati
ಜಾತಿನಿಂದನೆ ಪ್ರಕರಣ

By

Published : Feb 16, 2022, 11:18 AM IST

ಗಂಗಾವತಿ: ತಳ ಸಮುದಾಯವೊಂದನ್ನು ನೀವು ಬೆಕ್ಕು, ನಾಯಿಗಿಂತ ಕೀಳು ಎಂದು ಜರಿದ ಆರೋಪದ ಮೇಲೆ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ವಕೀಲ ತಿಪ್ಪೇರುದ್ರಸ್ವಾಮಿ ಮತ್ತು ಪರಮೇಶ್ವರ ಗೌಡ ಬೂದಗುಂಪಾ ಎಂಬುವವರ ಮೇಲೆ ಕಾರಟಗಿ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ.

ಹುಮ್ನಾಬಾದ್ ತಹಸೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಲಿಂಗಾಯತ ಸಮುದಾಯವು ಕಾರಟಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ತಿಪ್ಪೇರುದ್ರಸ್ವಾಮಿ ತಳ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಿದ್ದಾರೆ ಎಂದು ದೂರಲಾಗಿದೆ. ದಲಿತರು 100 ಜನ ಇದ್ದರೆ ನಾವು ನಾಲ್ಕು ಸಾವಿರ ಜನರಿದ್ದೇವೆ, ನೀವು ಬೆಕ್ಕು ನಾಯಿಗಿಂತ ಕೀಳು ಮಟ್ಟದ ಜನಾಂಗದವರು, ಜಾತಿ ಯುವಕರನ್ನು ಇಟ್ಟುಕೊಂಡು ಅಸಮಾನತೆ ಸೃಷ್ಟಿಸುತ್ತೀರಿ ಎಂದು ನಮ್ಮ ಸಮುದಾಯದ ವಿರುದ್ಧ ಸ್ವಾಮಿ ಮಾತನಾಡಿದ್ದಾರೆ ಎಂದು ಹನುಮಂತಪ್ಪ ಮಾದಿಗ ಎಂಬುವವರು ಜಾತಿನಿಂದನೆಯ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಚೆಂಬೆಳಕಿನ ಕವಿ, ನಾಡೋಜ ಡಾ.ಚನ್ನವೀರ ಕಣವಿ ಇನ್ನಿಲ್ಲ

ABOUT THE AUTHOR

...view details