ಕರ್ನಾಟಕ

karnataka

ETV Bharat / state

ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಆರೋಪ: ಮೂವರ ವಿರುದ್ಧ ದೂರು ದಾಖಲು - case registered against three

ಮೆರವಣಿಗೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇರೆಗೆ ಮೂವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

national flag
ರಾಷ್ಟ್ರಧ್ವಜ

By

Published : Oct 22, 2022, 1:31 PM IST

ಗಂಗಾವತಿ: ಮೆರವಣಿಯೊಂದರ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಹಿಂದೂ ಪರ ಸಂಘಟನೆಯ ಶ್ರೀಕಾಂತ್ ಹೊಸಕೇರಿ ಎಂಬುವರು ನೀಡಿದ ದೂರಿನ ಮೇರೆಗೆ ಗಂಗಾವತಿ ನಗರದ ಕಿಲ್ಲಾ ಏರಿಯಾದ ಮೊಹ್ಮದ್ರಫಿ ನಭಿಸಾಬ, ನಭಿಸಾಬ ಖಾಸೀಂಸಾಬ, ಎಬಿಡಿ ಮಹೇಬೂಬ ಎಂಬುವರ ವಿರುದ್ಧ 1971ರ ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ ಅಡಿ ದೂರು ದಾಖಲಾಗಿದೆ.

ಇದನ್ನೂ ಓದಿ:ಲಿಮ್ಕಾ ದಾಖಲೆ ಬರೆದ 13 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಾದ ರಾಷ್ಟ್ರಧ್ವಜ

ಮೆರವಣಿಗೆಯೊಂದರ ಸಂದರ್ಭದಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ತೆಗೆದು ಅರ್ಧ ಚಂದ್ರಾಕೃತಿ ಇಟ್ಟು ಧ್ವಜವನ್ನು ಅಪಮಾನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ABOUT THE AUTHOR

...view details