ಗಂಗಾವತಿ(ಕೊಪ್ಪಳ):ಹೆಚ್ಚು ಪರ್ಸಂಟೇಜ್ ನೀಡಿ ಕಾಮಗಾರಿ ಪೂರ್ಣ ಮಾಡಿದ್ದರೂ ಅಧಿಕಾರಿಗಳು ಬಿಲ್ ಮಾಡುತ್ತಿಲ್ಲ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಧಾನಿಗೆ ಪತ್ರ ಬರೆದ ಗಂಗಾವತಿಯ ಕಾಂಟ್ರಾಕ್ಟರ್ ವಿರುದ್ಧ ವಂಚನೆ ಆರೋಪದಡಿ ಎಫ್ಐಆರ್
ಕಾಮಗಾರಿಗೆ ಕಮಿಷನ್ ನೀಡಿದ್ದಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ದೂರು ನೀಡಿದ್ದ ಕೊಪ್ಪಳ ಜಿಲ್ಲೆಯ ಗುತ್ತಿಗೆದಾರನ ವಿರುದ್ಧ ವಂಚನೆ, ಸರ್ಕಾರಕ್ಕೆ ದ್ರೋಹ ಆರೋಪದಡಿ ಎಫ್ಆರ್ಐ ದಾಖಲಾಗಿದೆ.
ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಗುತ್ತಿಗೆದಾರ ಯರಿಸ್ವಾಮಿ ಎಂಬುವವರ ವಿರುದ್ಧ ಕಾರಟಗಿ ತಾಲೂಕು ಪಂಚಾಯಿತಿ ಇಒ, ಡಾ.ಡಿ.ಮೋಹನ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ನಂಬಿಕೆ ದ್ರೋಹ, ಸರ್ಕಾರಕ್ಕೆ ವಂಚನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರಿ ನಿಯಮಗಳಿಗೆ ಬದ್ಧರಿರದೇ ಗುತ್ತಿಗೆದಾರ ಸರ್ಕಾರಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ. ಕಾಮಗಾರಿಗಳಿಗೆ ಸಾಮಗ್ರಿ ಪೂರೈಸದೇ ತಾಂತ್ರಿಕ ಸಹಾಯಕರಿಗೆ ಹಣ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ಡಾ. ಡಿ. ಮೋಹನ್ ಉಲ್ಲೇಖಿಸಿದ್ದಾರೆ.
ಓದಿ:ಪಿಯು ಪರೀಕ್ಷೆಯ ಕೊನೆಯ ದಿನ ತಾಯಿ ಕಣ್ತಪ್ಪಿಸಿ ಲವರ್ ಜತೆ ವಿದ್ಯಾರ್ಥಿನಿ ಎಸ್ಕೇಪ್!