ಕರ್ನಾಟಕ

karnataka

By

Published : Jun 9, 2021, 2:34 PM IST

ETV Bharat / state

ಅಪ್ರಾಪ್ತೆಗೆ ಚುಡಾಯಿಸಿದ ಪ್ರಕರಣ; ಜಾತಿ ಸಂಘರ್ಷ, 28 ಜನರ ವಿರುದ್ದ ಕೇಸ್

ಕುಷ್ಟಗಿ ತಾಲೂಕಿನ ಪರಮನಟ್ಟಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ನಡೆದ ರಾಜಿ ಪಂಚಾಯತಿ ವೇಳೆ ಎರಡು ಬಣಗಳ ಮಧ್ಯೆ ಜಾತಿ ಸಂಘರ್ಷ ನಡೆದಿದೆ.

Kushtagi
28 ಜನರ ವಿರುದ್ದ ಪ್ರಕರಣ ದಾಖಲು

ಕುಷ್ಟಗಿ (ಕೊಪ್ಪಳ):ತಾಲೂಕಿನ ಪರಮನಟ್ಟಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ನಡೆದ ರಾಜಿ ಪಂಚಾಯತಿ ವೇಳೆ ಎರಡು ಬಣಗಳ ಮಧ್ಯೆ ಜಾತಿ ಸಂಘರ್ಷ ನಡೆದಿದೆ. ಈ ಸಂಬಂಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿವೆ.

ಏನಿದು ಪ್ರಕರಣ?

ಪರಮನಟ್ಟಿ ಗ್ರಾಮದ ವಿಜಯಕುಮಾರ ನಾಯಕವಾಡಿ ಎಂಬ ಯುವಕ ಅಪ್ರಾಪ್ತೆಗೆ ಪ್ರೇಮ‌‌ ನಿವೇದನೆಯ ವಾಟ್ಸಾಪ್​ ಸಂದೇಶ ಕಳುಹಿಸುತ್ತಿದ್ದ. ಅಲ್ಲದೇ ಗ್ರಾಮದಲ್ಲಿ ಹಿಂಬಾಲಿಸಿ ಕಣ್ಸನ್ನೆ, ಕೈಸನ್ನೆ ಮಾಡುತ್ತಿದ್ದ. ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ತಬ್ಬಿಕೊಂಡು ಅಶ್ಲೀಲವಾಗಿ ವರ್ತಿಸಿದ್ದ. ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಂದು ಹಾಕುವುದಾಗಿ ಬೆದರಿಸಿದ್ದ ಎಂದು ಅಪ್ರಾಪ್ತೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಳು.

ಪ್ರಕರಣ ಸಂಬಂಧ ಗ್ರಾಮದಲ್ಲಿ ರಾಜಿ ಪಂಚಾಯಿತಿ ನಡೆಸಲಾಗಿತ್ತು. ಈ ವೇಳೆ ಅಪ್ರಾಪ್ತೆ ಹಾಗೂ ಯುವಕನ ಕಡೆಯವರ ನಡುವೆ ಮಾರಾಮಾರಿಯಾಗಿದೆ. ಸದರಿ ಪ್ರಕರಣದಲ್ಲಿ ಯುವಕ ಸೇರಿದಂತೆ 28 ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ ಲಸಿಕೆ

ABOUT THE AUTHOR

...view details