ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭೆ ಪೌರಾಯುಕ್ತರ ವಿರುದ್ಧ ಪ್ರತಿದೂರು ನೀಡಿದ ಕಾಂಗ್ರೆಸ್​ ಮುಖಂಡನ ಪತ್ನಿ - ಈಟಿವಿ ಭಾರತ್​ ಕನ್ನಡ

ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ವಿರುದ್ಧ ಹಲ್ಲೆ ಆರೋಪದಡಿ ಕಾಂಗ್ರೆಸ್​ ಮುಖಂಡನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

Etv Bharatkn_GVT_01_3_Twisit_In_Commisinoer_manhandling_case_vis_KAC10005
Etv Bhaಕಾಂಗ್ರೆಸ್​ ಮುಖಂಡನ ಪತ್ನಿat

By

Published : Aug 3, 2022, 10:20 PM IST

ಗಂಗಾವತಿ:ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆಂದು ಇತ್ತೀಚೆಗೆನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಎಂಬುವವರು ಕಾಂಗ್ರೆಸ್ ಮುಖಂಡ ಶಂಕರರಾವ್ ಉಂಡಾಳೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪೌರಾಯುಕ್ತರೇ ತಮ್ಮ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಶಂಕರರಾವ್ ಉಂಡಾಳೆ ಪತ್ನಿ ಗಿರೀಜಾಬಾಯಿ ಉಂಡಾಳೆ ಪ್ರತಿ ದೂರು ನೀಡಿದ್ದಾರೆ.​

ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಇಲಾಹಿ ಕಾಲೋನಿಯಲ್ಲಿ ರಾಜಾಕಾಲುವೆ ಒತ್ತುವರಿಯಾಗಿದೆ. ಈ ಕುರಿತು ಪತಿ ಕಳೆದ ಐದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಸೋಮವಾರ ಸುರಿದ ಮಳೆಗೆ ಕಾಲುವೆಯಲ್ಲಿ ನೀರು ತುಂಬಿ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಈ ಕುರಿತು ಪೌರಾಯುಕ್ತರಿಗೆ ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ನೀಡುವಂತೆ ಕೇಳಿದ್ದರಿಂದ ಆಕ್ರೋಶಗೊಂಡ ಅವರು ಸಹಚರೊಂದಿಗೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ವಿಷಪ್ರಾಶನದಿಂದ ಯುವಕ ಸಾವು.. ಆಸ್ಪತ್ರೆಗೆ ಕರೆತಂದ ಯುವತಿ ಮೇಲೆಯೇ ಗುಮಾನಿ!

ABOUT THE AUTHOR

...view details