ಕುಷ್ಟಗಿ:ತಾಲೂಕಿನ ಮೇಗೂರು ಗ್ರಾಮದ ಬಳಿ ಬುಧವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿದ್ದರಿಂದ ಮಹಿಳೆಗೆ ತೀವ್ರ ಗಾಯವಾಗಿದೆ.
ಕುಷ್ಟಗಿಯಲ್ಲಿ ಕಾರು ಪಲ್ಟಿ: ಚಾಲಕ, ಮಹಿಳೆಗೆ ತೀವ್ರ ಗಾಯ - Car Pulty
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಕುಷ್ಟಗಿ ತಾಲೂಕಿನ ಮೇಗೂರು ಗ್ರಾಮದ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ. ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದೆ.
ಕಾರು ಪಲ್ಟ ಮಹಿಳೆಗೆ ತೀವ್ರ ಗಾಯ
ಬೋದೂರು ಗ್ರಾಮದ ವೆಂಕಟೇಶ ಹಾಗೂ ಅವರ ಪತ್ನಿ ಆದಮ್ಮ ಹಾಗೂ ಪುತ್ರ, ಲಿಂಗಸುಗೂರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದರು. ಬಳೂಟಗಿ, ಮೇಗೂರು ಗ್ರಾಮದ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಕಾರು, ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.
ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ನು ದೋಟಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಚಾಲಕ ವೆಂಕಟೇಶ ಪತ್ನಿ ಆದಮ್ಮಳಿಗೆ ತೀವ್ರ ಗಾಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆಂದು ಕೊಪ್ಪಳಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.