ಕರ್ನಾಟಕ

karnataka

ETV Bharat / state

​​​​​​​ವೈದ್ಯರ ಪರಿಸರ ಕಾಳಜಿಯಿಂದ ಜೀವ ತೆಳೆದ ಹಳ್ಳ: ಜನರ ಮೊಗದಲ್ಲಿ ಸಂತಸ - latest gangavati news

ನಗರದ ಅರ್ಧಭಾಗ ವ್ಯಾಪಿಸಿಕೊಂಡಿರುವ ದುರುಗಮ್ಮಹಳ್ಳವು ತುಂಬಿ ಹರಿಯುತ್ತಿದೆ. ಸತ್ತಪ್ರಾಣಿಗಳ ಕಳೇಬರ, ತ್ಯಾಜ್ಯಗಳಿಂದ ತುಂಬಿದ್ದ ಹಳ್ಳವನ್ನು ಸ್ವಚ್ಛಗೊಳಿಸಿ ಮರುಜೀವ ನೀಡಿದ್ದಾರೆ ದಂತ ವೈದ್ಯ ಶಿವಕುಮಾರ ಪಾಟೀಲ್​

ಗಂಗಾವತಿ ತಾಲೂಕಿನ ಅರ್ಧ ಭಾಗ ಆವರಿಸಿಕೊಂಡಿರುವ ದುರುಗಮ್ಮ ಹಳ್ಳವು ತುಂಬಿ ಹರಿಯುತ್ತಿದೆ

By

Published : Oct 9, 2019, 3:12 PM IST

ಗಂಗಾವತಿ:ಇಲ್ಲಿನ ದುರುಗಮ್ಮಹಳ್ಳವು ತುಂಬಿ ಹರಿಯುತ್ತಿದೆ. ಕಳೆದ ಹಲವು ವರ್ಷದಿಂದ ಸತ್ತಪ್ರಾಣಿಗಳ ಕಳೇಬರ ಬೀಸಾಡುವ, ತ್ಯಾಜ್ಯ ಎಸೆಯುವಂತಾಗಿದ್ದ ಹಳ್ಳಕ್ಕೆ, ಈಗ ಮರುಜೀವ ಸಿಕ್ಕಿದೆ.

ಗಂಗಾವತಿ ತಾಲೂಕಿನ ಅರ್ಧ ಭಾಗ ಆವರಿಸಿಕೊಂಡಿರುವ ದುರುಗಮ್ಮ ಹಳ್ಳವು ತುಂಬಿ ಹರಿಯುತ್ತಿದೆ

ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ್ ಅವರು 'ನಮ್ಮೂರು ನಮ್ಮಹಳ್ಳ' ಎಂಬ ಘೋಷ ವಾಕ್ಯದೊಂದಿಗೆ ಹುಡುಗರನ್ನು ಕಟ್ಟಿಕೊಂಡು, ಸ್ವಚ್ಛಗೊಳಿಸಿದ ಹಳ್ಳದಲ್ಲಿ ಮಳೆಯ ನೀರು ಹರಿದು ಹೋಗುತ್ತಿದ್ದು, ನೂರಾರು ಕೈಗಳ ಪರಿಶ್ರಮ ಈಗ ಫಲಿಸಿದೆ.

ನಗರದ ಅರ್ಧ ಭಾಗ ವ್ಯಾಪಿಸಿಕೊಂಡಿರುವ ಹಳ್ಳವನ್ನು ನಗರಸಭೆ ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ಮಾಡಿತ್ತು. ಅದರ ಪರಿಣಾಮವಾಗಿ ಅಪಾರ ಪ್ರಮಾಣದ ತ್ಯಾಜ್ಯ ಶೇಖರಣೆಯಾಗಿ ನೀರು ಹರಿದುಹೋಗದಂತೆ ಕಟ್ಟಿಕೊಂಡಿತ್ತು. ವೈದ್ಯನ ಪರಿಸರ ಕಾಳಜಿ, ಉತ್ಸಾಹದಿಂದ ಹಳ್ಳಕ್ಕೆ ಮರುಜೀವ ಬಂದಿದೆ.

ABOUT THE AUTHOR

...view details