ಕರ್ನಾಟಕ

karnataka

ETV Bharat / state

ಸಿಎಎ ವಿರುದ್ಧ ವೆಲ್ಫೇರ್ ಪಾರ್ಟಿಯಿಂದ ಅಭಿಯಾನ - ಕೊಪ್ಪಳದಲ್ಲಿ ವೆಲ್ಫೇರ್ ಪಾರ್ಟಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಕಾಯ್ದೆ ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ‌. ಸಿಎಎ ಕಾಯ್ದೆಯ ಜೊತೆಗೆ ಎನ್ಆರ್​ಸಿ ಹಾಗೂ ಎನ್​ಪಿಆರ್ ಕಾಯ್ದೆಯನ್ನು ಸಹ ನಮ್ಮ ಪಕ್ಷ ವಿರೋಧಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ  ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಹೇಳಿದ್ದಾರೆ.

ವೆಲ್ಫೇರ್ ಪಾರ್ಟಿ  ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, Campaign against CAA by Welfare Party At koppala
ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್

By

Published : Jan 23, 2020, 6:37 PM IST

ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜ.23 ರಿಂದ 30 ರವರೆಗೆ ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಘೋಷಣೆಯೊಂದಿಗೆ ಅಭಿಯಾನ ನಡೆಸಲಾಗುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಹೇಳಿದ್ದಾರೆ.

ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್

ನಗರದ ಮೀಡಿಯಾ ಕ್ಲಬ್​ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಕಾಯ್ದೆ ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ‌. ಸಿಎಎ ಕಾಯ್ದೆಯ ಜೊತೆಗೆ ಎನ್ಆರ್​ಸಿ ಹಾಗೂ ಎನ್​ಪಿಆರ್ ಕಾಯ್ದೆಯನ್ನು ಸಹ ನಮ್ಮ ಪಕ್ಷ ವಿರೋಧಿಸುತ್ತದೆ ಎಂದಿದ್ದಾರೆ.

ಪಕ್ಷ ಈಗಾಗಲೇ ಸಿಎಎ ಕಾಯ್ದೆ ಜಾರಿ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಅಲ್ಲದೆ, ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಎಂಬ ಘೋಷವಾಕ್ಯದೊಂದಿಗೆ ದೇಶವ್ಯಾಪಿಯಾಗಿ ಜನವರಿ 23 ರಿಂದ 30 ರವರೆಗೆ ಅಭಿಯಾನ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details