ಕರ್ನಾಟಕ

karnataka

ETV Bharat / state

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹಮತಕ್ಕಾಗಿ ಬಿಎಸ್​​ವೈ ರಾಜ್ಯ ಪ್ರವಾಸ: ಬಿ ವೈ ವಿಜಯೇಂದ್ರ

2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕೊಪ್ಪಳದಲ್ಲಿ ತಿಳಿಸಿದ್ದಾರೆ.

by vijayendra talks about by election
ಜೆಸಿಬಿಯಿಂದ ಪುಷ್ಪ ವೃಷ್ಟಿ

By

Published : Oct 21, 2021, 10:27 PM IST

ಕುಷ್ಟಗಿ (ಕೊಪ್ಪಳ):ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಬೇಕಿರುವ ಹಿನ್ನೆಲೆ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸಿಂದಗಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ಕೆ ಕುಷ್ಟಗಿ ಮೂಲಕ ತೆರಳುವ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ ಸುದೀರ್ಘ 30 ವರ್ಷಗಳ ರಾಜಕೀಯ ಹೋರಾಟದಲ್ಲಿ ರೈತರು, ಹಿಂದುಳಿದವರ ಹಾಗೂ ಎಲ್ಲ ವರ್ಗದವರ ಪರವಾಗಿ ಶ್ರಮವಹಿಸಿ, ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಬಡವರ ಕಣ್ಣೀರು ಎಲ್ಲಿ ಇರುತ್ತದೆಯೋ ಅಲ್ಲಿ ಯಡಿಯೂರಪ್ಪ ಇರುತ್ತಿದ್ದರು ಎಂದ್ರು. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಈ ಹಿಂದೆ ಯಾವ ಸಿಎಂ ನೀಡದ ಕೊಡುಗೆಗಳು ಯೋಜನೆಗಳನ್ನು ನೀಡಿದ್ದಾರೆ ಎಂದರು.

ಕೊಪ್ಪಳಕ್ಕೆ ವಿಜಯೇಂದ್ರ ಭೇಟಿ

ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ 135 ಕೋಟಿ ಜನ ಸಂಖ್ಯೆಯ ‌ಭಾರತದಲ್ಲಿ ಇಂದು 100 ಕೋಟಿ ಕೋವಿಡ್ ಲಸಿಕೆ ಹಾಕಿಸುವ‌ ಪ್ರಧಾನಿ ನರೇಂದ್ರ ‌ಮೋದಿ ಅವರ ಮಹಾತ್ಕಾರ್ಯ ವಿಶ್ವದಾಖಲೆಯಾಗಿದೆ ಎಂದು ಬಣ್ಣಿಸಿದರು.

ಶರಣು ತಳ್ಳೀಕೇರಿಗೆ ಎಂ.ಎಲ್ ಸಿ ಟಿಕೇಟ್ ಬಿವೈವಿ ವಿಶ್ವಾಸ:

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶರಣು ತಳ್ಳೀಕೇರಿಗೆ ವಿಧಾನ ಪರಿಷತ್ ಟಿಕೆಟ್ ಬಗ್ಗೆ ಪ್ರಸ್ತಾಪಿಸಿದ ವಿಜಯೇಂದ್ರ ಅವರು, ಹೆಸರೇ ತಳ್ಳೀಕೇರಿ ಇದ್ದು ಎಲ್ಲರನ್ನು ತಳ್ಳಿಕೊಂಡು ಮುಂದೆ ಬರುತ್ತಾರೆ. ಶರಣು ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಬಗ್ಗೆ ಪಕ್ಷ ನಿರ್ಧರಿಸಲಿದ್ದು ಅವರಿಗೇ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಜೆಸಿಬಿಯಿಂದ ಪುಷ್ಪ ವೃಷ್ಟಿ:

ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಲ ಕ್ರಾಸ್​​ಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಬಿ.ವೈ. ವಿಜಯೇಂದ್ರ ಅವರಿಗೆ ಹೆದ್ದಾರಿ ಅಕ್ಕ ಪಕ್ಕದಲ್ಲಿ ಜೆಸಿಬಿ ನಿಲ್ಲಿಸಿ ಪುಷ್ಪದ ಮಳೆಗೆರೆದು ಸಂಭ್ರಮಿಸಿದರು. ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳೀಕೇರಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ, ವಿದ್ಯುತ್ ನಿಗಮದ ಅಧ್ಯಕ್ಷ ತಮ್ಮೇಶಗೌಡ, ಅಮರೇಶ ಕರಡಿ, ನವೀನ ಗುಳಗಣ್ಣನವರ್ ಜವಳಿ ನಿಗಮದ ನಿರ್ದೇಶಕ ಮುತ್ತು ರಾಠೋಡ್, ನರೇಶ ಮತ್ತಿತರಿದ್ದರು.

ABOUT THE AUTHOR

...view details