ಗಂಗಾವತಿ (ಕೊಪ್ಪಳ):ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯವರು ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಇವರ ಈ ಪರದಾಟ ಶಮನ ಮಾಡುವ ಉದ್ದೇಶಕ್ಕೆ ಯುವಕನೊಬ್ಬ ಮುಂದಾಗಿದ್ದು, ದಿನಕ್ಕೆ ಐನೂರಕ್ಕೂ ಹೆಚ್ಚು ಜನರ ದಾಹ ತೀರಿಸುತ್ತಿದ್ದಾರೆ.
ದಿನಕ್ಕೆ ಐನೂರು ಜನರಿಗೆ ಮಜ್ಜಿಗೆ, ವಿಟಮಿನ್ 'ಸಿ' ಪಾನಿಯಾ ವಿತರಣೆ - ಜಯನಗರದ ಜಿ. ನಾಗೇಶ
ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40ರಿಂದ 50 ಲೀಟರ್ ಮಜ್ಜಿಗೆ ಹೊತ್ತುಕೊಂಡು ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯವರಿಗೆ ವಿತರಿಸುತ್ತಿದ್ದಾರೆ.

kpl
buttermilk-distribution-to-corona-warriors
ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40ರಿಂದ 50 ಲೀಟರ್ ಮಜ್ಜಿಗೆ ಹೊತ್ತುಕೊಂಡು ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಭಿಕ್ಷುಕರು, ಅನಾಥರು ಹಾಗೂ ನಗರಸಭೆ ಸಿಬ್ಬಂದಿಗೆ ಮಧ್ಯಾಹ್ನ ತಂಪಾದ ಮಜ್ಜಿಗೆ ವಿತರಿಸುತ್ತಿದ್ದಾರೆ.
ಬಿಸಿಲಿನ ತಾಪದಿಂದ ದೇಹಕ್ಕೆ ರಕ್ಷಣೆ ಒದಗಿಸುವ ವಿಟಾಮಿನ್ ಸಿ ಅಂಶವುಳ್ಳ ಪಾನಕ, ಲಿಂಬೆರಸ, ಷರಬತ್ತು, ಹಾಗೂ ಗ್ಲುಕೋಸ್ಯುಕ್ತ ಪಾನೀಯವನ್ನು ಉಚಿವಾಗಿ ವಿತರಿಸುವವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
Last Updated : Apr 15, 2020, 3:28 PM IST