ಕೊಪ್ಪಳ:ಕೊರೊನಾ ಅನ್ಲಾಕ್ನ ಭಾಗವಾಗಿ ನಾಳೆಯಿಂದ ಬಸ್ ಸಂಚಾರ ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳದ ಬಸ್ ನಿಲ್ದಾಣಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
ನಾಳೆಯಿಂದ ಬಸ್ ಸಂಚಾರ: ಕೊಪ್ಪಳದ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ - Koppal buses are re-starts
ಕೊರೊನಾ ಲಾಕ್ಡೌನ್ ಕಾರಣ ಸ್ಥಗಿತಗೊಂಡಿದ್ದ ಬಸ್ ಸಂಚಾರ ನಾಳೆಯಿಂದ ಪುನಾರಂಭಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಸಿದ್ಧತೆ ನಡೆಸಿವೆ. ಕೊಪ್ಪಳದಲ್ಲೂ ನಾಳೆ ಬಸ್ ಸಂಚಾರ ಪುನಾರಂಭಗೊಳ್ಳುತ್ತಿದೆ.
Koppal
ಕೊಪ್ಪಳ ಜಿಲ್ಲೆಯ ಐದು ಬಸ್ ಡಿಪೋಗಳಿಂದ ಬಸ್ ಸಂಚಾರ ಪುನಾರಂಭವಾಗಲಿದೆ. ನಾಳೆ ಮೊದಲ ದಿನ 150 ಕ್ಕೂ ಅಧಿಕ ಬಸ್ಗಳ ಓಡಾಟ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 410 ಬಸ್ ಸಂಚಾರದ ಮಾರ್ಗಗಳಿದ್ದು ಹಗಲು ಸಂಚರಿಸುವ ಬಸ್ಗಳ ಓಡಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಗ್ರಾಮೀಣ ಭಾಗದಲ್ಲಿ ವಾಸ್ತವ್ಯ ಹೂಡುವ ಬಸ್ಗಳ ಸಂಚಾರವಿಲ್ಲ ಹಾಗೂ ರಾತ್ರಿ ಸಂಚರಿಸುವ ಬಸ್ಗಳ ಓಡಾಟವಿರುವುದಿಲ್ಲ. ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಕಳೆದ ವರ್ಷದಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್ ನಿಲ್ದಾಣದಲ್ಲಿ ಮಾರ್ಕ್ ಮಾಡಲಾಗಿದೆ.