ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದಿನಿಂದ ಸಾರಿಗೆ ಬಸ್ಗಳು ರಸ್ತೆಗಿಳಿದಿವೆ. ಕೊಪ್ಪಳ ಡಿಪೋದಲ್ಲಿ ಬೆಳಗ್ಗೆಯೇ ಬಸ್ಗಳಿಗೆ ಪೂಜೆ ಸಲ್ಲಿಸಿ, ಸಂಚಾರ ಪ್ರಾರಂಭಿಸಲಾಯಿತು.
ಕೊಪ್ಪಳದಲ್ಲಿ 150 ಬಸ್ಗಳ ಸಂಚಾರ ಆರಂಭ - ಬಸ್ ಸಂಚಾರ ಆರಂಭ
ಕೊಪ್ಪಳದಲ್ಲಿ 5 ಬಸ್ ಡಿಪೋಗಳಿದ್ದು, ಇಂದು 150 ಬಸ್ಗಳನ್ನು ರಸ್ತೆಗಿಳಿಸುತ್ತಿರುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳದಲ್ಲಿ 150 ಬಸ್ಗಳ ಸಂಚಾರ ಆರಂಭ
ಕೊಪ್ಪಳದಲ್ಲಿ 150 ಬಸ್ಗಳ ಸಂಚಾರ ಆರಂಭ
ಕೊರೊನಾ ಸೋಂಕಿನ ಭೀತಿಯಿಂದ ಏಪ್ರಿಲ್ 28ರಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡಿದೆ. ಜಿಲ್ಲೆಯಲ್ಲಿ 5 ಬಸ್ ಡಿಪೋಗಳಿದ್ದು, ಇಂದು 150 ಬಸ್ಗಳನ್ನು ರಸ್ತೆಗಿಳಿಸುತ್ತಿರುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ನಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ನಿಲ್ದಾಣದತ್ತ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ:ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಯುವಕ: ಹರಸಾಹಸಪಟ್ಟು ರಕ್ಷಣೆ