ಕರ್ನಾಟಕ

karnataka

ETV Bharat / state

ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಬಳಿ ಬಸ್ ಪಲ್ಟಿ: ಐವರಿಗೆ ಗಾಯ - ಗಂಗಾವತಿ ಉಪವಿಭಾಗ ಆಸ್ಪತ್ರೆ

ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಬಳಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರ್ಲಾನಹಳ್ಳಿ ಬಳಿ ಬಸ್ ಪಲ್ಟಿ

By

Published : Sep 20, 2019, 10:48 AM IST

ಕೊಪ್ಪಳ:ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಅದೃಷ್ವವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಬಳಿ ಘಟನೆ ನಡೆದಿದೆ.

ಬಸ್​​ ಚಾಲಕ ಶಿವಪ್ಪ ಹಾಗೂ ಚಾಲಕ ಕಂ ನಿರ್ವಾಹಕ ಬಸವರಾಜ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಡಿಪೋಗೆ ಸೇರಿದ ಬಸ್ ಇದಾಗಿದ್ದು, ರಾಯಚೂರಿಗೆ ಪೊಲೀಸರನ್ನು ಡ್ರಾಪ್ ಮಾಡಿ ಡಿಪೋಗೆ ವಾಪಾಸ್ ತೆರಳುತ್ತಿರುವಾಗ ಮರ್ಲಾನಹಳ್ಳಿ ಬಳಿ ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಬಸ್ ಉರುಳಿದೆ.

ಮರ್ಲಾನಹಳ್ಳಿ ಬಳಿ ಬಸ್ ಪಲ್ಟಿ

ಗಾಯಾಳುಗಳನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ ಸುಮಾರು 10ಕ್ಕೂ ಹೆಚ್ಚು ಜರನು ಇದ್ದರು ಎನ್ನಲಾಗಿದೆ. ರಾತ್ರೋರಾತ್ರಿ ವಾಪಸಾಗುವಂತೆ ಮತ್ತು ಬರುವಾಗ ಪ್ರಯಾಣಿಕರನ್ನು ತುಂಬಿಕೊಂಡು ಬರಲು ಡಿಪೋದ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಚಾಲಕ -ನಿರ್ವಾಹಕರಿಗೆ ವಿಶ್ರಾಂತಿ ಇರಲಿಲ್ಲ ಎನ್ನಲಾಗಿದೆ. ಹೀಗೆ ಕರ್ತವ್ಯ ನಿಯೋಜನೆ ಮಾಡಿದ್ದರಿಂದ ಇಂತಹ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details