ಕರ್ನಾಟಕ

karnataka

ETV Bharat / state

ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆ ವಾಗ್ವಾದ: ಬಿಜೆಪಿ ಸದಸ್ಯರಿಂದ ಪ್ರತಿಭಟನೆ - Budget debate in the Gangavathi General Meeting

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿತ ವಿಷಯಗಳನ್ನು ಬಿಟ್ಟು ನೇರವಾಗಿ ಬಜೆಟ್ ಮಂಡನೆಗೆ ಮುಂದಾದಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಆಡಳಿತ ಪಕ್ಷದವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ
ಪ್ರತಿಭಟನೆ

By

Published : Mar 23, 2021, 2:33 PM IST

ಗಂಗಾವತಿ:ನಗರಸಭೆಯ ಸಾಮಾನ್ಯ ಸಭೆಯಲ್ಲಿ ಉದ್ದೇಶಿತ ಅಂಶಗಳನ್ನು ಚರ್ಚೆ ಬಿಟ್ಟು ಬಜೆಟ್ ಮಂಡನೆಗೆ ಮುಂದಾದ ಆಡಳಿತ ಪಕ್ಷದ ಕ್ರಮ ಖಂಡಿಸಿ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಅಧ್ಯಕ್ಷೆ ಮುಂದೆ ಪ್ರತಿಭಟನೆ ನಡೆಸಿದರು.

ಸಾಮಾನ್ಯ ಸಭೆ

ನಗರಸಭೆಯ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಮಾಲಾಶ್ರೀ ನೇತೃತ್ವದಲ್ಲಿ ಐಎಂಎ ಭವನದಲ್ಲಿ ಆಯೋಜಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆಯೇ ಚರ್ಚಿತ ವಿಷಯಗಳನ್ನು ಬಿಟ್ಟು ನೇರವಾಗಿ ಬಜೆಟ್ ಮಂಡನೆಗೆ ಅಧಿಕಾರಿಗಳು ಮುಂದಾದರು. ಇದಕ್ಕೆ ವಿಪಕ್ಷವಾದ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಬಿಜೆಪಿಗರ ವಿರೋಧ ಲೆಕ್ಕಿಸದೇ ಆಡಳಿತಾರೂಢ ಸದಸ್ಯರು ಬಜೆಟ್​ ಅನುಮೋದನೆ ಮಾಡುವಂತೆ ಅಧ್ಯಕ್ಷೆಯನ್ನು ಒತ್ತಾಯಿಸಿದರು. ಇದರಿಂದ ಕೆರಳಿದ ಬಿಜೆಪಿಗರು, ಅಧ್ಯಕ್ಷೆಯ ಮೇಜಿನ ಬಳಿ ಬಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನೂ ಲೆಕ್ಕಿಸದ ಆಡಳಿತಾರೂಢ ಕಾಂಗ್ರೆಸ್ಸಿಗರು, ಸಭೆಯಲ್ಲಿ ಬಿಜೆಪಿಗರು ಅಭಿವೃದ್ಧಿ ವಿಚಾರಕ್ಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಉದ್ದೇಶಿತ 44 ಅಂಶಗಳನ್ನು ಅನುಮೋದನೆ ನೀಡಿದ್ದಾಗಿ ಸಭೆಯಲ್ಲಿ ಘೋಷಣೆ ಮಾಡಿದರು. ಇದನ್ನು ವಿರೋಧಿಸಿದ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿದರು.

ABOUT THE AUTHOR

...view details