ಕರ್ನಾಟಕ

karnataka

ETV Bharat / state

ಕೊಪ್ಪಳ : ಕಟ್ಟಿದ್ದ ಒಂದೇ ತಿಂಗಳಿನಲ್ಲಿ ಕೊಚ್ಚಿಹೋದ ಸೇತುವೆ.. ಕಳಪೆ ಕಾಮಗಾರಿ ಆರೋಪ - ಕೊಪ್ಪಳದಲ್ಲಿ ಕಳಪೆ ಕಾಮಗಾರಿಯಿಂದ ಕೊಚ್ಚಿಹೋದ ಸೇತುವೆ

ಲಕ್ಷಾಂತರ ರೂಪಾಯಿ ವ್ಯಯಿಸಿ ಕಟ್ಟಿದ್ದ ಸೇತುವೆಯೊಂದು ತಿಂಗಳೊಳಗೆ ಮಳೆಗೆ ಕೊಚ್ಚಿ ಹೋಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ..

ಕೊಚ್ಚಿಹೋದ ಸೇತುವೆ
ಕೊಚ್ಚಿಹೋದ ಸೇತುವೆ

By

Published : Jun 17, 2022, 9:43 PM IST

ಕೊಪ್ಪಳ :ತಾಲೂಕಿನ ಕವಲೂರು ಹಾಗೂ ಹಂದ್ರಾಳ ಮಧ್ಯದ ಹಳ್ಳವೊಂದಕ್ಕೆ ಇತ್ತೀಚೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕೊಚ್ಚಿಹೋಗಿದೆ. ಕವಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ಸುತ್ತಮುತ್ತ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು.

ಕಟ್ಟಿದ್ದ ಒಂದೇ ತಿಂಗಳಿನಲ್ಲಿ ಕೊಚ್ಚಿಹೋದ ಸೇತುವೆ ಕುರಿತು ಸಾರ್ವಜನಿಕರು ಮಾತನಾಡಿರುವುದು..

ಕವಲೂರಿನ ಬಹುತೇಕ ರೈತರು ತಮ್ಮ ಜಮೀನುಗಳಿಗೆ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸೇತುವೆ ಬಿದ್ದು ಹೋಗಿರುವುದರಿಂದ ಅವರಿಗೆಲ್ಲ ತೊಂದರೆಯಾಗಿದೆ. ಕೇವಲ 10 ಕಿ. ಮೀ ದೂರವನ್ನ ಸುಮಾರು 30-35 ಕಿ. ಮೀ ಸುತ್ತಿ ಬಳಸಿ ಸಂಚರಿಸಬೇಕಾಗಿದೆ.

ಕಳಪೆ ಕಾಮಗಾರಿ : ಸೇತುವೆ ಕೊಚ್ಚಿಕೊಂಡು ಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಟ್ಟು 80 ಲಕ್ಷ ರೂಪಾಯಿ ಯೋಜನೆಯ ಸೇತುವೆ ಇದಾಗಿದ್ದು, ಸರ್ಕಾರದಿಂದ 40 ಲಕ್ಷ ರೂಪಾಯಿ ಮಂಜೂರಾಗಿದೆ. ಸದ್ಯ ಜನರ ಅನುಕೂಲಕ್ಕಾಗಿ ಈಗ 20 ಲಕ್ಷ ರೂಪಾಯಿಯಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಕುರಿತು ಮತ್ತೆ ಯೋಜನೆ ತಯಾರಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭೂಸೇನಾ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ.

ಓದಿ:ರಾಷ್ಟ್ರಪತಿ ಹುದ್ದೆಗೆ ಹೆಚ್ ಡಿ ದೇವೇಗೌಡರು ಸ್ಪರ್ಧಿಸಲ್ಲ: ಮಾಜಿ ಸಿಎಂ ಹೆಚ್​ಡಿಕೆ ಸ್ಪಷ್ಟನೆ

ABOUT THE AUTHOR

...view details