ಕರ್ನಾಟಕ

karnataka

ETV Bharat / state

ಮನೆಗೆ ನುಗ್ಗಿ ಯುವಕರಿಂದ ಹಲ್ಲೆ: ಹಲವರಿಗೆ ಗಾಯ - gangavathi latest crime news

ಯುವಕರ ಗುಂಪೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದು ಹಲವರು ಗಾಯಗೊಂಡ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.

boys gang attack in gangavathi
ಮನೆಗೆ ನುಗ್ಗಿ ಯುವಕರಿಂದ ಹಲ್ಲೆ

By

Published : May 4, 2020, 7:13 PM IST

ಗಂಗಾವತಿ:ಮನೆಗೆ ನುಗ್ಗಿದ ಯುವಕರು ಕಂಡ ಕಂಡವರ ಮೇಲೆ ಹಲ್ಲೆ ಮಾಡಿದ್ದು, ಮನೆಯವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಮನೆಗೆ ನುಗ್ಗಿ ಯುವಕರಿಂದ ಹಲ್ಲೆ

ನಗರದ ಲಿಂಗರಾಜ ಕ್ಯಾಂಪಿನ ಯುವಕರ ತಂಡ ಈ ಹಲ್ಲೆ ನಡೆಸಿದೆ ಎಂಬ ಮಾಹಿತಿ ದೊರೆತಿದೆ. ಎಬಿಎಸ್ ನಗರದಲ್ಲಿ ಬೈಕ್ ರಿಪೇರಿ ಮಾಡಿಕೊಂಡಿದ್ದ ಮೆಕಾನಿಕ್ ರಾಜಾ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಗುಂಪು ಅಲ್ಲಿಂದ ಮುರಾರಿ ಕ್ಯಾಂಪಿನ ಹಲವು ಯುವಕ ಮೇಲೆ ದಾಳಿ ಮಾಡಿದೆ. ಹಳೆಯ ದ್ವೇಷವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಮುರಾರಿನಗರ ಶಿವರಾಜ ನಾಯಕ, ವಿಜಯ ನಾಯಕ, ಹಮಾಲರ ಕಾಲೋನಿಯ ಮಂಜುನಾಥ, ವಿಜಯ ಬಸಪ್ಪ ಎಂಬ ಯುವಕರಿಗೆ ಗಾಯಗಳಾಗಿವೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details