ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕಿನ ಹುಲಿಯಾಪುರ ಕೆರೆಯಲ್ಲಿ ಯುವಕ ಏಕಾಏಕಿ ಕಣ್ಮರೆಯಾಗಿದ್ದಾನೆ.
ಹುಲಿಯಾಪುರ ಕೆರೆಯಲ್ಲಿ ಯುವಕ ಕಣ್ಮರೆ : ರಾತ್ರಿಯೂ ಶೋಧ ಕಾರ್ಯ - ಕೆರೆಯಲ್ಲಿ ಯುವಕ ಕಣ್ಮರೆ
ಕುಷ್ಟಗಿ ತಾಲೂಕಿನ ಹುಲಿಯಾಪುರ ಕೆರೆಯಲ್ಲಿ ಬಟ್ಟೆ ತೊಳೆಯಲು ಬಂದಿದ್ದ 19 ವರ್ಷದ ಯುವಕನೋರ್ವ ಏಕಾಏಕಿ ಕಣ್ಮರೆಯಾಗಿದ್ದಾನೆ.
ಹುಲಿಯಾಪುರ ಕೆರೆಯಲ್ಲಿ ಯುವಕ ಕಣ್ಮರೆ
ಹುಲಿಯಾಪೂರ ಗ್ರಾಮದ 19 ವರ್ಷದ ಮುಸ್ತಾಫಾ ಮಹಿಬೂಬಸಾಬ್ ಹನುಮಸಾಗರ ನಾಪತ್ತೆಯಾದ ಯುವಕ. ದ್ವಿತೀಯ ಪಿಯು ವಿದ್ಯಾರ್ಥಿ ನಿನ್ನೆ(ಶನಿವಾರ) ಸ್ವಗ್ರಾಮಕ್ಕೆ ಬಂದಿದ್ದ.
ಭಾನುವಾರ ಕೆರೆಯಲ್ಲಿ ಬೈಕ್ ಬಟ್ಟೆ ತೊಳೆಯಲು ಬಂದಿದ್ದ. ಕೆರೆಯ ದಡದಲ್ಲಿ ಬೈಕ್, ಮೊಬೈಲ್, ಬಟ್ಟೆ, ಪಾದರಕ್ಷೆ ಇವೆ. ಆದರೆ ಯುವಕ ಮುಸ್ತಫಾ ಕಣ್ಮರೆಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಗ್ನಿಶಾಮಕ ಠಾಣಾಧಿಕಾರಿ ಎನ್.ರಾಜು ನೇತೃತ್ವದಲ್ಲಿ ರಾತ್ರಿಯೂ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ.