ಗಂಗಾವತಿ: ಉತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಬಾಲಿವುಡ್ ನಟರೊಬ್ಬರು ಆನೆಗೊಂದಿಯ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದಿದ್ದಾರೆ.
ತಾಲೂಕಿನ ಅಂಜನಾದ್ರಿ ದೇಗುಲ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ಆಗಾಗ ರಾಜ್ಯ ಮಟ್ಟದ ಗಮನ ಸೆಳೆಯುತ್ತದೆ. ಇದೀಗ ಬಾಲಿವುಡ್ ನಟ ಆದಿಲ್ ಹುಸೇನ್ ಆನೆಗೊಂದಿ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆಯುವ ಮೂಲಕ ಗಮನ ಸೆಳೆದ ಘಟನೆ ನಡೆದಿದೆ.