ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ತಮಿಳುನಾಡು ಮೂಲದ ಯುವಕನ ಸಾವು - Corona in Koppal

ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಮೃತ ಯುವಕನ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ಯುವಕ ತಮಿಳುನಾಡಿನವನು ಎನ್ನುವುದು ಮಾತ್ರ ಗೊತ್ತಾಗಿದೆ.

Body of a young man found in Koppal
ಕುಷ್ಟಗಿಯಲ್ಲಿ ತಮಿಳುನಾಡು ಮೂಲದ ಯುವಕನ ಶವ ಪತ್ತೆ

By

Published : Jun 29, 2020, 10:09 PM IST

ಕುಷ್ಟಗಿ (ಕೊಪ್ಪಳ) :ಕ್ಯಾದಿಗುಪ್ಪ ಕ್ರಾಸ್​​ನ ಮಹಾರಾಣಿ ಡಾಬಾದ ಬಳಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ತೀವ್ರ ಅಸ್ವಸ್ಥನಾಗಿ ಒದ್ದಾಡುತ್ತಿದ್ದ ಯುವಕನಿಗೆ ಸ್ಥಳೀಯರು ನೀರು ಹಾಕುವಷ್ಟರಲ್ಲಿ ಆತ ಬಿಕ್ಕಳಿಕೆಯಿಂದ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕುಷ್ಟಗಿ-ಹುನಗುಂದ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗುಪ್ಪ ಕ್ರಾಸ್​​ನ ಮಹಾರಾಣಿ ಡಾಬಾದ ಬಳಿ ಯುವಕ ಮೃತ ಪಟ್ಟಿದ್ದು, ಈತ ತಮಿಳುನಾಡು ಮೂಲದವನೆಂದು ತಿಳಿದು ಬಂದಿದೆ. ಆತನ ಜೇಬಿನಲ್ಲಿ ಗುರುತಿನ ಪತ್ರದಿಂದ ಈ ವಿಚಾರ ಗೊತ್ತಾಗಿ, ಕೊರೊನಾ ಭೀತಿ ವ್ಯಕ್ತವಾಗಿದೆ. ಜನ ಶವವನ್ನು ಮುಟ್ಟಲು ಹಿಂಜರಿದಿರುವುದು ಕಂಡು ಬಂತು.

ನಂತರ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಮೃತ ಯುವಕನ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ಯುವಕ ತಮಿಳುನಾಡಿನವನು ಎನ್ನುವುದು ಮಾತ್ರ ಗೊತ್ತಾಗಿದ್ದು, ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details