ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ18 ಸ್ಥಾನ: ಹಾಲಪ್ಪ ಆಚಾರ್​​ ವಿಶ್ವಾಸ - ಬೆಳೆ ಹಾನಿ ವರದಿ

ನಮ್ಮ‌ ಪಕ್ಷಕ್ಕೆ ಸಿದ್ಧಾಂತ, ತತ್ವವಿದೆ. ನಮ್ಮದೇ ಆದ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪ್ರಚಾರ ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ನಮ್ಮ ಅಭ್ಯರ್ಥಿಗಳ ಪರ ಒಲವು ತೋರುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್​​ ಹೇಳಿದರು.

Minister Halappa Achar
ಸಚಿವ ಹಾಲಪ್ಪ ಆಚಾರ್

By

Published : Dec 3, 2021, 5:40 PM IST

ಕುಷ್ಟಗಿ(ಕೊಪ್ಪಳ): ವಿಧಾನ ಪರಿಷತ್ ಚುನಾವಣೆಯ 25 ಕ್ಷೇತ್ರಗಳ ಪೈಕಿ ನಿಶ್ಚಿತವಾಗಿ ಕನಿಷ್ಠ 18 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ 18 ಸ್ಥಾನ ಬಿಜೆಪಿಗೆ: ಹಾಲಪ್ಪ ಆಚಾರ್​​ ವಿಶ್ವಾಸ

ಕುಷ್ಟಗಿಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಪ್ರಚಾರಾರ್ಥ ಸಭೆಗೆ ಆಗಮಿಸಿದ ಅವರು, ಇದಕ್ಕೂ ಮುುನ್ನ ವಕೀಲ ಎ.ಹೆಚ್. ಪಲ್ಲೇದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶೇ.90 ರಷ್ಟು ಬೆಳೆ ಹಾನಿ ವರದಿ:

ಅಕಾಲಿಕ ಮಳೆಗೆ ಹಿಂಗಾರು ಹಂಗಾಮಿನ ಕಡಲೆ ಬೆಳೆ ನಾಶವಾಗಿದ್ದು, ಸರ್ವೆ ಮಾಡಲು ಆದೇಶಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು. ಈಗಾಗಲೇ ಶೇ.90 ರಷ್ಟು ಬೆಳೆ ಹಾನಿ ವರದಿಯ ಮಾಹಿತಿ ಅಪ್ಲೋಡ್ ಆಗಿದೆ. ಮುಂದಿನ ವಾರದಲ್ಲಿ ಎನ್​​ಡಿಆರ್​​ಎಫ್ ಮಾರ್ಗಸೂಚಿ ಅನ್ವಯ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಪರಿಹಾರ ಜಮೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ರೈತಾಪಿ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ:

ಪ್ರಾಥಮಿಕ ವರದಿ ಅನ್ವಯ ಕೊಪ್ಪಳ ಜಿಲ್ಲೆಯಲ್ಲಿ 28 ಸಾವಿರ ಹೆಕ್ಟೇರ್, ರಾಯಚೂರು ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್, ಅದರಲ್ಲಿಯೂ ಸಿಂಧನೂರು ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್ ಬೆಳೆ ಹಾನಿಯ ಮಾಹಿತಿ ನೀಡಿದರು. ಅಕಾಲಿಕ ಮಳೆಯಿಂದ ಹಾನಿಗೀಡಾದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸತತ ಎರಡು ದಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ರೈತಾಪಿ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಸಚಿವರು ತಿಳಿಸಿದರು.

ರಾಯಚೂರು ಜಿಲ್ಲೆಯ ಲಿಂಗಸುಗೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಗೆ ಬೇಸತ್ತು, ಒಟ್ಟು ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಹಾಗೂ ಸಂಸದರು ಸದರಿ ರೈತರ ಮನೆಗೆ ಭೇಟಿ ನೀಡಿ, ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ್ದು, ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಬಿಜೆಪಿಗೆ ಒಲವು ಹೆಚ್ಚು:

ನಮ್ಮ‌ ಪಕ್ಷಕ್ಕೆ ಸಿದ್ಧಾಂತ, ತತ್ವವಿದೆ. ನಮ್ಮದೇ ಆದ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪ್ರಚಾರ ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ನಮ್ಮ ಅಭ್ಯರ್ಥಿಗಳ ಪರ ಒಲವು ತೋರುತ್ತಿದ್ದಾರೆ. ಕೊಪ್ಪಳ- ರಾಯಚೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನ್ನಟ್ಟಿ ಗೆಲುವು ಖಚಿತ ಎಂದರು. ಈ ವೇಳೆ ದೇವದುರ್ಗ ಶಾಸಕ ಶಿವನಗೌಡ ನಾಯಕ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ:ದಾವಣಗೆರೆ - ಚಿತ್ರದುರ್ಗದಿಂದ ಕಾಂಗ್ರೆಸ್​ನಲ್ಲಿ ಸ್ಪರ್ಧಿಸಲು ಯಾವುದೇ ಗಂಡಸರು ಇರಲಿಲ್ವಾ: ಭೈರತಿ ಬಸವರಾಜ್​

ABOUT THE AUTHOR

...view details