ಕರ್ನಾಟಕ

karnataka

ETV Bharat / state

ಸಿಎಂ ಬಗ್ಗೆ ಹೆಚ್‌ಡಿಕೆ ಎಚ್ಚರಿಕೆಯಿಂದ ಮಾತನಾಡಲಿ: ಶಾಸಕ ದಡೇಸೂಗೂರು - ಸಿಎಂ ಬಗ್ಗೆ ಮಾತನಾಡುವಾಗ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಬೇಕು ಶಾಸಕ ದಡೇಸೂಗೂರು

ಕುಮಾರಸ್ವಾಮಿ ಅವರು ಈ ಹಿಂದೆ ರಾಜ್ಯವನ್ನಾಳಿದವರು. ಅವರು ಸಿಎಂ ಬಗ್ಗೆ ಗೌರವದಿಂದ ಮಾತನಾಡಬೇಕು. ಮಾಜಿ ಮುಖ್ಯಮಂತ್ರಿಯೇ ಹೀಗೆ ಮಾತನಾಡಿದರೆ ಇನ್ನು ಜನಸಾಮಾನ್ಯರು ಹೇಗೆ ಮಾತನಾಡಬಹುದು ಎಂದು ಬಸವರಾಜ ದಡೇಸೂಗೂರು ಪ್ರಶ್ನಿಸಿದರು.

ಬಸವರಾಜ ದಡೇಸೂಗೂರು
ಬಸವರಾಜ ದಡೇಸೂಗೂರು

By

Published : Mar 31, 2022, 4:05 PM IST

ಕೊಪ್ಪಳ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಕಿವಿಮಾತು ಹೇಳಿದ್ದಾರೆ. ಕೊಪ್ಪಳದ ಮುನಿರಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಿಂದೆ ರಾಜ್ಯವನ್ನಾಳಿದವರು, ಅವರು ಸಿಎಂ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದರು.


ಸಿಎಂ ಬಸವರಾಜ ಬೊಮ್ಮಾಯಿ ಗೌರವದಿಂದ ಮಾತನಾಡುತ್ತಾರೆ. ಮಾಜಿ ಮುಖ್ಯಮಂತ್ರಿಯೇ ಹೀಗೆ ಮಾತನಾಡಿದರೆ ಇನ್ನು ಜನಸಾಮಾನ್ಯರು ಹೇಗೆ ಮಾತನಾಡಬಹುದು ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ, ಹಿಂದೂ ಮುಖಂಡರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

For All Latest Updates

TAGGED:

ABOUT THE AUTHOR

...view details