ಕರ್ನಾಟಕ

karnataka

ETV Bharat / state

ಆತ್ಮ ನಿರ್ಭರ ಭಾರತ ಅಭಿಯಾನದಿಂದ ಮೋದಿ ವಿಶ್ವಾಸ ಮೂಡಿಸಿದ್ದಾರೆ: ದೊಡ್ಡನಗೌಡ ಪಾಟೀಲ - Kushtagi news

ಆತ್ಮ ನಿರ್ಭರ ಭಾರತ ಅಭಿಯಾನದಿಂದ ಪ್ರಧಾನಿ ಮೋದಿಯವರು ರಾಷ್ಟ್ರದ ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ಹೇಳಿದ್ದಾರೆ.

BJP leaders
ಕರಪತ್ರ ಹಂಚುವ ಪ್ರಚಾರಾಂದೋಲನಕ್ಕೆ ಸಾಂಕೇತಿಕವಾಗಿ ಚಾಲನೆ

By

Published : Jun 14, 2020, 5:18 PM IST

ಕುಷ್ಟಗಿ: ಕೊರೊನಾ, ಅಂಫಾನ್ ಚಂಡಮಾರುತದಂತಹ ಸಂಕಷ್ಟದ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಗರೀಬ್​ ಕಲ್ಯಾಣ ಯೋಜನೆ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನದಿಂದ ವಿಶ್ವಾಸ ಮೂಡಿಸಿದರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಮೋದಿ ಸರ್ಕಾರ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ 18ನೇ ವಾರ್ಡ್​ನ ಶ್ರೀ ರಾಘವೇಂದ್ರ ಮಠದ ಮೂಲಕ ಮನೆ ಮನೆಗೆ ಕರಪತ್ರ ಹಂಚುವ ಪ್ರಚಾರಾಂದೋಲನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿದಿಂದಾಗಿ ದೇಶ ಮತ್ತಷ್ಟು ಸುಭದ್ರವಾಗಿದೆ. ಕೊರೊನಾ ಭೀತಿಯಿಂದ ವಿಶ್ವವೇ ನಲುಗಿದರೂ ದೇಶಕ್ಕೆ ಗಂಡಾಂತರ ಬಾರದ ರೀತಿಯಲ್ಲಿ ಆಡಳಿತ ನಡೆಸಿರುವುದು ಜಾಗತಿಕ ಮೆಚ್ಚುಗೆಗೆ ಕಾರಣವಾಗಿದೆ ಎಂದರು.

ಕೇಂದ್ರದ ಆತ್ಮನಿರ್ಭರ ಭಾರತ ಅಭಿಯಾನದ ಅರಿವು ಮೂಡಿಸಿದ ಬಿಜೆಪಿ ನಾಯಕರು

ಈ ವೇಳೆ ತಾಲೂಕಾ ಅಧ್ಯಕ್ಷ ಬಸವರಾಜ್ ಹಳ್ಳೂರು, ವಿಜಯಕುಮಾರ ಹಿರೇಮಠ, ಜಯತೀರ್ಥ ಸೌಧಿ, ಪುರಸಭೆ ಸದಸ್ಯ ಜಿ.ಕೆ. ಹಿರೇಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details