ಗಂಗಾವತಿ(ಕೊಪ್ಪಳ ಜಿಲ್ಲೆ): ಪ್ರಮುಖ ಬಿಜೆಪಿ ನಾಯಕ ಮತ್ತು ಮಹಿಳಾಧಿಕಾರಿಯೊಬ್ಬರ ನಡುವೆ ನಡೆದಿದೆ ಎನ್ನಲಾಗುತ್ತಿರುವ ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋ ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಆಡಿಯೋದಲ್ಲಿ ಏನಿದೆ?
ಗಂಗಾವತಿ(ಕೊಪ್ಪಳ ಜಿಲ್ಲೆ): ಪ್ರಮುಖ ಬಿಜೆಪಿ ನಾಯಕ ಮತ್ತು ಮಹಿಳಾಧಿಕಾರಿಯೊಬ್ಬರ ನಡುವೆ ನಡೆದಿದೆ ಎನ್ನಲಾಗುತ್ತಿರುವ ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋ ಜಿಲ್ಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಆಡಿಯೋದಲ್ಲಿ ಏನಿದೆ?
ಸಂಭಾಷಣೆ ವೇಳೆ ಏಕವಚನದಲ್ಲಿ ಮಾತನಾಡುತ್ತಿರುವುದು ಮತ್ತು ಮಹಿಳೆಯು ಮುಖಂಡನ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಆಡಿಯೋದಲ್ಲಿದೆ. ಇದೇ ವಿಚಾರವಾಗಿ ಮಹಿಳೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಮತ್ತು ಸಹೋದ್ಯೋಗಿಗಳ ನೆರವಿನಿಂದ ಕಾನೂನು ನೆರವು ಪಡೆಯಲೂ ಯತ್ನಿಸಿದ್ದರೆಂಬ ಮಾತುಗಳು ಕೇಳಿಬರುತ್ತಿವೆ.
ಓದಿ:ಕೋವಿಡ್ ಹೆಚ್ಚಳ: ಸಂಜೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ: ಜಾರಿಯಾಗುತ್ತಾ ಸೆಮಿ ಲಾಕ್ಡೌನ್?
ಸುಮಾರು 12 ನಿಮಿಷಗಳ ಈ ಆಡಿಯೋ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ದಾಳವಾಗಿ ಬಳಕೆಯಾಗುವ ಸಾಧ್ಯತೆಯಿದ್ದು, ಬಿಜೆಪಿಗೆ ಮುಜುಗುರ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.