ಕರ್ನಾಟಕ

karnataka

ETV Bharat / state

ಸುಳ್ಳು, ಮೋಸ ಹಾಗು ವಂಚನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್: ನಳಿನ್‌ ಕುಮಾರ್ ಕಟೀಲ್

ಗಲಭೆ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP state President Nalin Kumar Kateel) ಆರೋಪಿಸಿದ್ದಾರೆ. ಇದೇ ವೇಳೆ ಬಿಟ್​ಕಾಯಿನ್​ ಹಗರಣ(Bitcoin scam) ಕುರಿತು ಆರೋಪ ಮಾಡ್ತಿರುವ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

BJP President Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Nov 18, 2021, 12:47 PM IST

ಕೊಪ್ಪಳ: ದೇಶದಲ್ಲಿ ಸುಳ್ಳು, ಮೋಸ, ವಂಚನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP President Nalin Kumar Kateel) ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳಿನ ಸರಮಾಲೆಯಲ್ಲಿ ಬದುಕಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಎರಡು ಕೆಲಸ ಮಾಡುತ್ತದೆ. ಅದರಲ್ಲಿ ಒಂದು ಗಲಭೆ ಸೃಷ್ಟಿ ಮಾಡುವುದು, ಇನ್ನೊಂದು ಸುಳ್ಳು ಸೃಷ್ಟಿ ಮಾಡುವುದು. ಗಲಭೆ ಸೃಷ್ಟಿ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ. ರೈತರನ್ನು ಎತ್ತಿಕಟ್ಟಿ ಬೆಂಕಿ ಹಚ್ಚಿದರು. ರಫೇಲ್​​ನಲ್ಲಿ ಅತೀ ಹೆಚ್ಚು ಲಂಚ ಪಡೆದಿರುವುದು ಕಾಂಗ್ರೆಸ್ ಎಂದು ಕಟೀಲ್ ಆರೋಪಿಸಿದರು.

ಬಿಟ್ ಕಾಯಿನ್ ಹಗರಣ(Bitcoin Scam) ಸುಳ್ಳು. ಕರ್ನಾಟಕದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಸರ್ಕಾರದ ಮೇಲೆ ಗೌರವವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಬಿಟ್ ಕಾಯಿನ್ ಹಗರಣ ಸೃಷ್ಟಿಸಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು‌.

ಇದನ್ನೂ ಓದಿ:ಚನ್ನರಾಜ್​​ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ: ಸಹೋದರನ ಜೊತೆ ಹೆಬ್ಬಾಳ್ಕರ್ ಟೆಂಪಲ್ ರನ್

ABOUT THE AUTHOR

...view details