ಕರ್ನಾಟಕ

karnataka

ETV Bharat / state

ಗ್ರಹಣ ಸಂದರ್ಭದಲ್ಲಿ ಜನಿಸಿದ ಕರು.. ಮಗಳಂತೆ ಸಾಕಿ ಹುಟ್ಟುಹಬ್ಬ ಆಚರಿಸಿದ ಮಾಲೀಕ.. - ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮ

ಗ್ರಹಣ ಸಂದರ್ಭದಲ್ಲಿ ಜನಿಸಿದ್ದ ಈ ಕರುವಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡಿಕೊಂಡಿದ್ದಾರೆ. ಆದರೆ ಅದರ ಮಾಲೀಕ ಮಾತ್ರ ಧನಾತ್ಮಕವಾಗಿ ಚಿಂತಿಸಿ ಕರುವನ್ನು ಮಾರಾಟ ಮಾಡದೆ, ಕಂಕಿಣಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದಾನೆ.

birthday-celebration-calf-born-on-the-eclipse-day-news
ಕರುವಿನ ಹುಟ್ಟುಹಬ್ಬವನ್ನು ಅದರ ಮಾಲೀಕ

By

Published : Dec 26, 2020, 3:36 PM IST

Updated : Dec 26, 2020, 3:42 PM IST

ಕೊಪ್ಪಳ: ಗ್ರಹಣ ಸಂದರ್ಭದಲ್ಲಿ ಜನ್ಮ ತಾಳಿದ ಕರುವಿನ ಹುಟ್ಟುಹಬ್ಬವನ್ನು ಅದರ ಮಾಲೀಕ ಆಚರಿಸಿದ್ದು, ಹಬ್ಬದ ಸಂಭ್ರಮ ಮತ್ತು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕರುವಿನ ಹುಟ್ಟುಹಬ್ಬವನ್ನು ಆಚರಿಸಿದ ಮಾಲೀಕ

ಕಳೆದ ವರ್ಷ ಡಿಸೆಂಬರ್ 26 ರಂದು ಸಂಭವಿಸಿದ ಖಗ್ರಾಸ್ ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ, ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಜಗದೀಶ ಚಟ್ಟಿ ಎಂಬುವರ ಹಸು ಕರುವಿಗೆ ಜನ್ಮ ನೀಡಿದೆ.

ಓದಿ: ಈಟಿವಿ ಭಾರತ ಫಲಶೃತಿ : ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ

ಗ್ರಹಣ ಸಂದರ್ಭದಲ್ಲಿ ಜನಿಸಿದ್ದ ಈ ಕರುವಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡಿಕೊಂಡಿದ್ದಾರೆ. ಆದರೆ ಅದರ ಮಾಲೀಕ ಮಾತ್ರ ಧನಾತ್ಮಕವಾಗಿ ಚಿಂತಿಸಿ ಕರುವನ್ನು ಮಾರಾಟ ಮಾಡದೆ, ಕಂಕಿಣಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದಾನೆ. ಅಷ್ಟೆ ಅಲ್ಲದೆ ಇಂದು ಕಂಕಿಣಿಯ ಮೊದಲ ವರ್ಷದ ಜನ್ಮ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ದನದ ಕೊಟ್ಟಿಗೆಯಲ್ಲಿ ಬಣ್ಣ ಬಣ್ಣದ ಬಲೂನು, ಕೇಕ್, ಹಸಿ ಜೋಳದ ದಂಟಿನ ಅಲಂಕಾರ ಮಾಡಿ ಕಂಕಿಣಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

ನಾವು ಎರಡು ಆಕಳು ಮಾತ್ರ ತಂದಿದ್ದೆವು, ಈ ಕರು ಜನಿಸಿದ ಬಳಿಕ ಈಗ ನಮ್ಮ‌ ಮನೆಯಲ್ಲಿ 6 ಆಕಳು ಇವೆ. ಕರು ಜನಿಸಿದ ಬಳಿಕ ನಮಗೆ ಒಳ್ಳೆಯದೆ ಆಗಿದೆ. ಹೀಗಾಗಿ ಮನೆಯ ಮಕ್ಕಳಂತೆ ಕರು ಸಹ ನಮ್ಮ ಮನೆಯ ಮಗಳು. ಹೀಗಾಗಿ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದೇವೆ ಎನ್ನುತ್ತಾರೆ ಜಗದೀಶ ಚಟ್ಟಿ ಕುಟುಂಬದವರು.

Last Updated : Dec 26, 2020, 3:42 PM IST

ABOUT THE AUTHOR

...view details