ಗಂಗಾವತಿ:ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾದ ಘಟನೆ ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ಬೆಟ್ಟದ ಸಮೀಪ ಸಂಭವಿಸಿದೆ.
ಬೈಕ್ಗಳು ಮುಖಾಮುಖಿ ಡಿಕ್ಕಿ: ಒಬ್ಬ ಸ್ಥಳದಲ್ಲಿಯೇ ಸಾವು, ಇಬ್ಬರಿಗೆ ಗಾಯ - DurgaDevi hill near Anegondi
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ಬೆಟ್ಟದ ಸಮೀಪ ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಎರಡು ದ್ವಿಚಕ್ರ ವಾಹನಗಳ ಸವಾರರ ಅಲಕ್ಷ್ಯ ಹಾಗೂ ವೇಗದಿಂದ ವಾಹನ ಚಲಾಯಿಸಿರುವುದೇ ಕಾರಣ ಎನ್ನಲಾಗಿದೆ.
ಬೈಕ್ ಗಳು ಮುಖಾಮುಕಿ ಡಿಕ್ಕಿ: ಒಬ್ಬ ಸ್ಥಳದಲ್ಲಿಯೇ ಸಾವು, ಇಬ್ಬರಿಗೆ ಗಾಯ
ಮೃತನನ್ನು ರಾಂಪು ಗ್ರಾಮದ ವೈ. ರವಿ ಪಿಚ್ಚಿ ರಂಗಯ್ಯ (39) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲೆ ಮೂಲದ ವೀರೇಶ ಕುಮಾರ ಬಸವರಾಜ ಹಾಗೂ ಪತ್ನಿ ಶೋಭಾ ವೀರೇಶ ಕುಮಾರ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಆನೆಗೊಂದಿ ಗ್ರಾಮದ ಮೃತನ ಸಂಬಂಧಿ ಶ್ರೀಕಾಂತ್ ವೇಣುಗೋಪಾಲ ಎಂಬುವರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಗೆ ಎರಡು ದ್ವಿಚಕ್ರ ವಾಹನಗಳ ಸವಾರರ ಅಲಕ್ಷ್ಯ ಹಾಗೂ ವೇಗದಿಂದ ವಾಹನ ಚಲಾಯಿಸಿರುವುದೇ ಕಾರಣ ಎಂದು ಕಂಡುಬಂದಿದೆ.