ಕರ್ನಾಟಕ

karnataka

ETV Bharat / state

ಬೈಕ್​ ಟಿಪ್ಪರ್​ ಡಿಕ್ಕಿ: ಸವಾರ ಸ್ಥಳದಲ್ಲೆ ಸಾವು - ಬೈಕ್​ ಟಿಪ್ಪರ್​ ಅಪಘಾತ

ವೇಗವಾಗಿ ಬಂದ ಟಿಪ್ಪರ್​​ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಜರುಗಿದ್ದು, ಟಿಪ್ಪರ್​ ಚಾಲಕ ಪರಾರಿಯಾಗಿದ್ದಾನೆ.

bike accident
ಬೈಕ್​ ಟಿಪ್ಪರ್​ ಡಿಕ್ಕಿ

By

Published : May 21, 2020, 9:58 AM IST

ಕೊಪ್ಪಳ: ಬೈಕ್​ಗೆ ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಬೈಕ್​ ಸವಾರ ಮಂಜುನಾಥ ರಾಮಣ್ಣ ಮುಕ್ಕುಂಪಿ(22) ಸಾವನ್ನಪ್ಪಿದ್ದು, ಗವಿ ಎಂಬುವವರಿಗೆ ಗಾಯಗಳಾಗಿವೆ. ವೇಗವಾಗಿ ಬಂದ ಟಿಪ್ಪರ್​​ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದ್ದು, ಟಿಪ್ಪರ್​ ಸಮೇತ ಚಾಲಕ ಪರಾರಿಯಾಗಿದ್ದಾನೆ.

ಪ್ರಕರಣ ಮುನಿರಾಬಾದ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ABOUT THE AUTHOR

...view details