ಗಂಗಾವತಿ: ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿ, ತನ್ನ ಊರಿನಲ್ಲೇ ಅಡವಿಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಶರಣಬಸವ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಒಟ್ಟು 33 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿವಿಧ ಜಿಲ್ಲೆಗಳಿಂದ ಕದ್ದ ಒಟ್ಟು 33 ಬೈಕ್‌ಗಳ ವಶ: ಖತರ್ನಾಕ್ ಕಳ್ಳನ ಸೆರೆ - bike theft case in gangavathi
ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿ, ತನ್ನ ಊರಿನಲ್ಲೇ ಅಡವಿಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಒಟ್ಟು 33 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![ವಿವಿಧ ಜಿಲ್ಲೆಗಳಿಂದ ಕದ್ದ ಒಟ್ಟು 33 ಬೈಕ್‌ಗಳ ವಶ: ಖತರ್ನಾಕ್ ಕಳ್ಳನ ಸೆರೆ bike-theft-case-in-gangavathi](https://etvbharatimages.akamaized.net/etvbharat/prod-images/768-512-14930321-thumbnail-3x2-yy.jpg)
ಹಲವು ಜಿಲ್ಲೆಗಳಿಂದ ಒಟ್ಟು 33 ಬೈಕ್ ಕದ್ದ ಖತರ್ನಾಕ್ ಕಳ್ಳನ ಸೆರೆ
ವಿವಿಧ ಜಿಲ್ಲೆಗಳಿಂದ ಕದ್ದ ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು
ಬಂಧಿತ ಆರೋಪಿಯು ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ನೆರೆಹೊರೆಯ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುವ ಕಾಯಕವನ್ನೆ ವೃತ್ತಿಯಾಗಿಸಿಕೊಂಡಿದ್ದ.ಬಳಿಕ ಕದ್ದ ವಾಹನಗಳನ್ನು ಹದಿನೈದರಿಂದ ಇಪ್ಪತ್ತು ಸಾವಿರ ಮೊತ್ತಕ್ಕೆ ಅಡವಿಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ವಾಹನಗಳಲ್ಲಿ ಎಂಟಕ್ಕೂ ಅಧಿಕ ವಾಹನಗಳನ್ನು ತನ್ನ ಊರಿನಲ್ಲಿಯೇ ಅಡವಿಟ್ಟಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ :ಕೊರಿಯರ್ನಲ್ಲಿ ಶಸ್ತ್ರಾಸ್ತ್ರ ಸಾಗಣೆ.. ಆರೋಪಿಗಳ ಬಂಧನ