ಗಂಗಾವತಿ: ಜ.9 ಮತ್ತು 10ರಂದು ನಡೆಯಲಿರುವ ಆನೆಗೊಂದಿ ಉತ್ಸವ- 20ರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೈಕ್ ಸ್ಟಂಟ್ ನೆರೆದಿದ್ದವರ ಮೈನವಿರೇಳಿಸಿತು.
ಆನೆಗೊಂದಿಯಲ್ಲಿ ನೋಡುಗರ ಮೈನವಿರೇಳಿಸಿದ ಬೈಕ್ ಸ್ಟಂಟ್ - Bike stunt in Ganavati Anegondi
ಜ.9 ಮತ್ತು 10ರಂದು ನಡೆಯಲಿರುವ ಆನೆಗೊಂದಿ ಉತ್ಸವ- 20ರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೈಕ್ ಸ್ಟಂಟ್ ನೆರೆದಿದ್ದವರ ಮೈನವಿರೇಳಿಸಿತು.
ಮೈನವಿರೇಳಿಸಿದ ಬೈಕ್ ಸ್ಟಂಟ್
ಭಟ್ಕಳ ಮೂಲದ ಸಾಹಸಿ ಬೈಕ್ ರೈಡರ್ ಗಳಾದ ಅಖಿಲ್, ಸೈಯದ್ ಗೌಸ್ ಹಾಗೂ ಸಚಿನ್ ಸುಮಾರು ಅರ್ಧ ಗಂಟೆಗಳ ಕಾಲ ನಡೆಸಿದ ಬೈಕ್ ಸ್ಟಂಟ್ ನೋಡುಗರನ್ನು ರೋಮಾಂಚನಗೊಳಿಸಿತು.
ಫ್ರಿ ಸ್ಟೈಲ್ ರೈಡಿಂಗ್, ವೀಲ್ಹಿಂಗ್, ಲ- ಸ್ಟಾಪಿ, ಫ್ಲಾಗ್ ಮಾರ್ಚಿಂಗ್, ಡ್ರಪ್ಟಿಂಗ್, ಚೈನ್ ಶೋ, ಬರ್ನೊ, ಹ್ಯಾಂಡಲ್ ಕ್ರಿಷ್, ಸ್ಟಾಂಡಿಂಗ್, ಸ್ಲಿಪಿಂಗ್, 350 ಡಿಗ್ರಿ ಸ್ಟಂಟ್, ಫೈಯರ್ ರಿಂಗ್ ಹೀಗೆ ನಾನಾ ನಮೂನೆಯ ಸ್ಟಂಟ್ ಮಾಡುವ ಮೂಲಕ ಜನರ ಗಮನ ಸೆಳೆದರು.