ಕರ್ನಾಟಕ

karnataka

ETV Bharat / state

ಬೈಕ್ ಮೇಲೆ ಚಲಿಸುತ್ತಿದ್ದ ಲಾರಿ ಹರಿದರೂ ಬದುಕುಳಿದ ಸವಾರ - Kushtagi

ಕುಷ್ಟಗಿ ಪಟ್ಟಣದ ಹೊರವಲಯದ ಕುಷ್ಟಗಿ- ಹುನಗುಂದ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ದೋಟಿಹಾಳ ಕ್ರಾಸ್ ಬಳಿ ಲಾರಿ ಬೈಕ್​ಮೇಲೆ ಹರಿದರೂ ಕೂಡ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ.

Kushtagi
ಅಪಘಾತ

By

Published : Jun 18, 2020, 9:27 AM IST

ಕುಷ್ಟಗಿ (ಕೊಪ್ಪಳ): ಪಟ್ಟಣದ ಹೊರವಲಯದ ಕುಷ್ಟಗಿ- ಹುನಗುಂದ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ದೋಟಿಹಾಳ ಕ್ರಾಸ್ (ಕಿತ್ತೂರು ಚನ್ನಮ್ಮ ಸರ್ಕಲ್) ಬಳಿ ಲಾರಿಯೊಂದು ಬೈಕ್​ ಮೇಲೆ ಹರಿದರೂ ಕೂಡ ಬೈಕ್ ಸವಾರ ಪವಾಡವೆಂಬಂತೆ ಪಾರಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಗಿಣಗೇರಾದಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಲಾರಿ, ಮೇಲ್ಸೇತುವೆ ಇಳಿದು ಸಾಗುವ ವೇಳೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಬೈಕ್ ಸವಾರನ ಮೇಲೆ ಹರಿದಿದೆ. ಬೈಕ್ ಸವಾರ ಕೂದಲೆಳೆಯ ಅಂತರದಲ್ಲಿ ಮೃತ್ಯುವಿನಿಂದ ಪಾರಾಗಿದ್ದಾನೆ. ಲಾರಿ ಹರಿದ ರಭಸಕ್ಕೆ ಬೈಕ್ ಮುಂಭಾಗದ ಗಾಲಿ, ಹೆಡ್​ಲೈಟ್ ನಜ್ಜು ಗುಜ್ಜಾಗಿದೆ.

ಘಟನಾ ಸ್ಥಳ

ಈ ಘಟನೆಯಾಗುತ್ತಿದ್ದಂತೆ ಅದೇ ಮಾರ್ಗದ ಬೈಕ್ ಸವಾರರು ಲಾರಿಯನ್ನು ಬೆನ್ನತ್ತಿದ್ದರು. ಲಾರಿಯನ್ನು ಚೇಸ್ ಮಾಡುವ ವೇಳೆ ಬದುಕುಳಿದ ಬೈಕ್ ಸವಾರನು ಸಹ ಬೆನ್ನತ್ತಿ ಹೋಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ಕೆ.ಬೋದೂರು ಬಳಿ ಇರುವ ಟೋಲ್​ಗೇಟ್​ನಲ್ಲಿ ಚಾಲಕ ಸಮೇತ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲಾರಿ ಚಾಲಕ ಅಥಣಿ ತಾಲೂಕು ಶೆಡಬಾಳ ಗ್ರಾಮದ ರಾಜು ಹನಮಂತಪ್ಪ ನಾಯಕ್ ಎಂದು ಗುರುತಿಸಲಾಗಿದೆ.

ABOUT THE AUTHOR

...view details