ಕರ್ನಾಟಕ

karnataka

ETV Bharat / state

ಒಂದೇ ಬೈಕ್ ಮೇಲೆ ಪತಿ, ಪತ್ನಿ, ಇಬ್ಬರು ಮಕ್ಕಳು: ಹ್ಯಾಂಡಲ್​ ಅಲುಗಾಡಿಸಲಾಗದೇ ತಡೆಗೋಡೆಗೆ ಡಿಕ್ಕಿಯಾಗಿ ದುರಂತ - ಕೊಪ್ಪಳ ಬಳಿ ಅಪಘಾತದಲ್ಲಿ ತಂದೆ ಮಗಳು ಸಾವು

ಬೈಕ್​ನಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ
ಅಪಘಾತ

By

Published : Jul 4, 2022, 10:48 PM IST

ಕುಷ್ಟಗಿ: ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ವಣಗೇರಾ ಮೇಲ್ಸೇತುವೆ ಬಳಿ ಲೋಹದ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ತಂದೆ, ಮಗಳು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತೊಂಡಿಹಾಳ ಗ್ರಾಮದ ಬಸಯ್ಯ ಕಳಕಯ್ಯ ಹಿರೇಮಠ (29) ಹಾಗೂ 5 ವರ್ಷದ ಮಗಳು ಅಕ್ಷರಾ ಮೃತಪಟ್ಟವರು.

ಕುಷ್ಟಗಿಯ ಶರಣಯ್ಯ ಹಿರೇಮನ್ನಾಪೂರ ಅವರ ಮನೆಗೆ ಬಂದಿದ್ದ ಇವರು ಬೈಕಿನಲ್ಲಿ ಪತ್ನಿ ಶಾಂತಮ್ಮ ಹಾಗೂ ಇಬ್ಬರ ಮಕ್ಕಳ ಜೊತೆ ಬಸಯ್ಯ ತಮ್ಮ ಸ್ವಗ್ರಾಮ ತೊಂಡಿಹಾಳಕ್ಕೆ ವಾಪಸ್​ ಆಗುತ್ತಿದ್ದರು. ವಣಗೇರಾ ಮೇಲ್ಸೇತುವೆ ದಾಟಿ ಹೊರಟಿದ್ದ ವೇಳೆ ಬೈಕ್​​ನ ಹ್ಯಾಂಡಲ್ ಹೊರಳಿಸಲು ಸಾಧ್ಯವಾಗದೇ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಸಯ್ಯ ಹಿರೇಮಠ ಹಾಗೂ ಮಗಳು ಸ್ಥಳದಲ್ಲಿ ಮೃತರಾಗಿದ್ದಾರೆ.

ಮೃತನ ಪತ್ನಿ ಶಾಂತಮ್ಮ, ಮಗ ಶ್ರೀಶೈಲ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್​​ಐ ತಿಮ್ಮಣ್ಣ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಶಿವಮೊಗ್ಗ: ರೈಲಿಗೆ ಸಿಲುಕಿ 40ಕ್ಕೂ ಹೆಚ್ಚು ಕುರಿಗಳ ಸಾವು)

ABOUT THE AUTHOR

...view details