ಗಂಗಾವತಿ:ಬೈಕ್ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ ಯುವಕನೊಬ್ಬನನ್ನು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಢೇಸ್ಗೂರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಅಪಘಾತದಲ್ಲಿ ನರಳಾಡುತ್ತಿದ್ದ ಯುವಕ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ - ಮರಳಿ-ಶ್ರೀರಾಮನಗರ ಮಾರ್ಗ ಮಧ್ಯೆ
ಅಪಘಾತದಿಂದ ರಸ್ತೆಯಲ್ಲೇ ನರಳಾಡುತ್ತಿದ್ದ ಯುವಕನನ್ನು ಶಾಸಕ ಬಸವರಾಜ ದಢೇಸ್ಗೂರು ಆಸ್ಪತ್ರೆಗೆ ಸೇರಿಸಿರುವ ಘಟನೆ ಮರಳಿ-ಶ್ರೀರಾಮನಗರ ಮಾರ್ಗ ಮಧ್ಯೆದಲ್ಲಿ ನಡೆದಿದೆ.
ಅಪಘಾತದಲ್ಲಿ ನರಳಾಡುತ್ತಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕನಕಗಿರಿ ಶಾಸಕ
ಕನಕಗಿರಿ ಕ್ಷೇತ್ರದ ನಾನಾ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಳ್ಳಲಾಗುತ್ತಿರುವ ನರೇಗಾ ಯೋಜನೆಯಲ್ಲಿನ ಕಾಮಗಾರಿಗಳ ಪರಿಶೀಲನೆಗೆ ಶಾಸಕರು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದರು. ಮರಳಿಯಿಂದ ಶ್ರೀರಾಮನಗರಕ್ಕೆ ಹೋಗುವ ಮಾರ್ಗ ಮಧ್ಯೆದಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕಿಡಾಗಿತ್ತು.
ಈ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಕೂಡಲೇ ವಾಹನದಿಂದ ಇಳಿದು ಅಪಾಯಕ್ಕೀಡಾದ ಯುವಕನನ್ನು ಮತ್ತೊಂದು ದ್ವಿಚಕ್ರ ವಾಹನದ ವ್ಯವಸ್ಥೆ ಮಾಡಿಸಿ ಆಸ್ಪತ್ರೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದರು.