ಕುಷ್ಟಗಿ:ನಗರದ ಎಪಿಎಂಸಿ ಬಳಿ ಎರಡು ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬಿಜಕಲ್ ಗ್ರಾ.ಪಂ. ಸದಸ್ಯ ಶರಣಪ್ಪ ಹಾದಿಮನಿ ಸಾವಿಗೀಡಾಗಿದ್ದಾರೆ.
ಅಪಘಾತಕ್ಕೀಡಾದ ಬೈಕ್: ಗ್ರಾ.ಪಂ.ಸದಸ್ಯನ ದುರ್ಮರಣ - ಶರಣಪ್ಪ ಹಾದಿಮನಿ ಸಾವು
ಬಿಜಕಲ್ ಗ್ರಾ.ಪಂ.ಗೆ ಇತ್ತೀಚೆಗೆ ಕೆ.ಬೋದೂರು ಮತ ಕ್ಷೇತ್ರದಿಂದ ಚುನಾಯಿತನಾಗಿದ್ದ ಶರಣಪ್ಪ ಹಾದಿಮನಿ ಎಂಬವರು ಸ್ವಗ್ರಾಮ ಕೆ.ಬೋದೂರ ಗ್ರಾಮದಿಂದ ಕುಷ್ಟಗಿಗೆ ಬರುತ್ತಿರುವಾಗ ಬೈಕ್ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ಗ್ರಾ.ಪಂ.ಸದಸ್ಯ ಶರಣಪ್ಪ ಹಾದಿಮನಿ ಸಾವು
ಎಪಿಎಂಸಿಯಿಂದ ಬರುತ್ತಿದ್ದ ತೆಗ್ಗಿನ ಓಣಿಯ ಗ್ಯಾನಪ್ಪ ಜೋಗೇರ ಬೈಕ್ಗೆ ಗ್ರಾ.ಪಂ. ಸದಸ್ಯ ಶರಣಪ್ಪ ಹಾದಿಮನಿ ಬೈಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಆಯತಪ್ಪಿ ಬಿದ್ದ ಶರಣಪ್ಪ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು.
ಇನ್ನೋರ್ವ ಬೈಕ್ ಸವಾರ ಗ್ಯಾನಪ್ಪ ಜೋಗೇರಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.