ಕೊಪ್ಪಳ:ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಬಾಲಕ ಮಂಜುನಾಥ್ ರೇಣುಕಪ್ಪ ಬುರ್ಲಿ (11) ಕಾಣೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಕನನ್ನು ಕೊಲೆ ಮಾಡಿ ಹಳ್ಳದಲ್ಲಿ ಹೂತು ಹಾಕಿರುವ ಭಯಾನಕ ವಿಷಯ ಹೊರಬಿದ್ದಿದೆ.
ಬಾಲಕನ ನಾಪತ್ತೆ ಪ್ರಕರಣ... ಬಂಧಿತ ಆರೋಪಿ ಬಾಯ್ಬಿಟ್ಟ ಬೆಚ್ಚಿಬೀಳಿಸುವ ವಿಷ್ಯ..! - Kukkanur Police Station
ತಳಕಲ್ ಗ್ರಾಮದಲ್ಲಿ ಬಾಲಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಈ ಪ್ರಕರಣರಲ್ಲಿ ಆಘಾತ ಮೂಡಿಸುವ ಅಂಶ ಬೆಳಕಿಗೆ ಬಂದಿದ್ದು, ಬಾಲಕನನ್ನು ಕೊಲೆ ಮಾಡಿ ಹೂತು ಹಾಕಿರುವುದಾಗಿ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ.
![ಬಾಲಕನ ನಾಪತ್ತೆ ಪ್ರಕರಣ... ಬಂಧಿತ ಆರೋಪಿ ಬಾಯ್ಬಿಟ್ಟ ಬೆಚ್ಚಿಬೀಳಿಸುವ ವಿಷ್ಯ..! Big Twist in boy missing case...murderer accepted his brutality](https://etvbharatimages.akamaized.net/etvbharat/prod-images/768-512-8126106-thumbnail-3x2-kpl.jpg)
ಬಾಲಕನ ಕಾಣೆಯಾಗಿದ್ದ ಪ್ರಕರಣ...ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿ
ಕುಕನೂರು ಪೊಲೀಸ್ ಠಾಣೆಯಲ್ಲಿ ಜುಲೈ 19 ರಂದು ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕನೂರು ಪೊಲೀಸರು ಆರೋಪಿ ಅಣ್ಣಪ್ಪ ನಡುವಲಮನಿ ಎಂಬಾತನನ್ನು ಬಂಧಿಸಿ ಸ್ಥಳ ಪರಿಶೀಲನೆಗೆ ಕರೆತಂದಿದ್ದಾರೆ.
ಬಾಲಕ ಕಾಣೆಯಾಗಿದ್ದ ಪ್ರಕರಣ...ಹತ್ಯೆಗೈದು ಹೂತಿರುವುದಾಗಿ ಒಪ್ಪಿಕೊಡ ಆರೋಪಿ
ಬಾಲಕನನ್ನು ಕೊಲೆ ಮಾಡಿ ಹೂತು ಹಾಕಿರುವ ಸ್ಥಳವನ್ನು ಆರೋಪಿಯು ಪೊಲೀಸರಿಗೆ ತೋರಿಸಿದ್ದಾನೆ. ಕೊಪ್ಪಳ ತಾಲೂಕಿನ ಹಲಗೇರಿ ಬಳಿ ಇರುವ ಹಳ್ಳವೊಂದರಲ್ಲಿ ಬಾಲಕನನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ. ಈ ಕುರಿತಂತೆ ಪೊಲೀಸರು ಆರೋಪಿಯನ್ನು ಸ್ಥಳದಲ್ಲಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
Last Updated : Jul 22, 2020, 4:59 PM IST