ಕರ್ನಾಟಕ

karnataka

ETV Bharat / state

ಮಸೀದಿಯಲ್ಲಿ ಮುಸಲ್ಮಾನರಿಗೆ ಬೇವು-ಬೆಲ್ಲ ವಿತರಣೆ - ಹಿಂದೂ- ಮುಸ್ಲಿಂ ವಿವಾದ

ಹಿಂದೂ- ಮುಸಲ್ಮಾನರ ನಡುವೆ ಸೌಹಾರ್ದತೆ ಸೃಷ್ಟಿಸುವ ನಿಟ್ಟಿನಲ್ಲಿ ಚಿಕ್ಕಜಂತಕಲ್ ಪ್ರದೇಶದ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಮುಸಲ್ಮಾನರಿಗೆ ಬೇವು- ಬೆಲ್ಲ ವಿತರಿಸಲಾಯಿತು.

bevu-bella-distributed-to-muslims-in-masjid
ಮಸೀದಿಯಲ್ಲಿ ಮುಸಲ್ಮಾನರಿಗೆ ಬೇವು-ಬೆಲ್ಲ ವಿತರಣೆ

By

Published : Apr 3, 2022, 1:59 PM IST

ಗಂಗಾವತಿ: ರಾಜ್ಯದಲ್ಲಿ ತಲೆ ಎತ್ತಿರುವ ಹಿಂದು-ಮುಸಲ್ಮಾನರ‌ ನಡುವಿನ ವಿವಾದಗಳನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ನಗರದಲ್ಲಿ ಮುಸಲ್ಮಾನರಿಗೆ ಬೇವು-ಬೆಲ್ಲ ವಿತರಿಸುವ ಮೂಲಕ ಸೌಹಾರ್ದತೆ ನಿರ್ಮಾಣ ಯತ್ನ ನಡೆದಿದೆ. ಎಸ್​ಎಫ್​ಐ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ ನೇತೃತ್ವದಲ್ಲಿ ಚಿಕ್ಕಜಂತಕಲ್ ಪ್ರದೇಶದ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಮುಸಲ್ಮಾನರಿಗೆ ಬೇವು- ಬೆಲ್ಲ ವಿತರಿಸಿ ಸೌಹಾರ್ದತೆಗೆ ಯತ್ನಿಸಲಾಯಿತು.

ಮಸೀದಿಯಲ್ಲಿ ಮುಸಲ್ಮಾನರಿಗೆ ಬೇವು-ಬೆಲ್ಲ ವಿತರಣೆ

ಬಳಿಕ ಮಾತನಾಡಿದ ಅಮರೇಶ, ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಇಡೀ ರಾಜ್ಯದ ಜನತೆ ಆತಂಕಕ್ಕೀಡಾಗಿದೆ. ಅತಿ ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಕುವೆಂಪು ಹೇಳಿದಂತೆ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಹೀಗಾಗಿ ಎಲ್ಲಾ ಹಬ್ಬಗಳನ್ನು ಎಲ್ಲಾ ಸಮುದಾಯದವರು ಸಾಮರಸ್ಯದಿಂದ ಆಚರಿಸೋಣ ಎಂದು ಅಮರೇಶ ಕಡಗದ ಮನವಿ ಮಾಡಿದರು.

ABOUT THE AUTHOR

...view details