ಗಂಗಾವತಿ(ಕೊಪ್ಪಳ):ಪಟ್ಟಣದ ಅಕ್ಷರ ಪಬ್ಲಿಕ್ ಶಾಲೆಯ ಮಕ್ಕಳು ಹಮ್ಮಿಕೊಂಡಿದ್ದ ಬೆಸ್ಟ್ ಔಟ್ ಆಫ್ ವೇಸ್ಟ್ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಇವುಗಳನ್ನು ಮಕ್ಕಳು ಮನೆ ತ್ಯಾಜ್ಯದಿಂದಲೇ ತಯಾರಿಸಿದ್ದಾರೆ.
ವಿಜ್ಞಾನ, ಗಣಿತ, ಜೀವಶಾಸ್ತ್ರ, ಭೂಗೋಳ, ಭೌತಶಾಸ್ತ್ರ, ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಒಂದರಿಂದ ಹತ್ತನೇ ತರಗತಿಯ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಇವುಗಳನ್ನು ಸಿದ್ಧಪಡಿಸಿದ್ದಾರೆ. ಬಳಸಿ ಬಿಸಾಡುವ ಇಯರ್ ಬಡ್ಗಳಿಂದ ಮಾನವನ ಅಸ್ತಿ ಪಂಜರ, ಪಿಸ್ತಾದ ಸಿಪ್ಪೆಯಿಂದ ಗೋಡೆ ಅಲಂಕಾರಿಕ ವಸ್ತುಗಳು, ಕೊಬ್ಬರಿ ಚಿಪ್ಪಿನಿಂದ ನಾನಾ ಮಾದರಿಯ ವಸ್ತುಗಳನ್ನು ಮಾಡಿದ್ದು, ಗಮನ ಸೆಳೆದವು.