ಗಂಗಾವತಿ:ಕೇಂದ್ರ ಸರ್ಕಾರ ವಿತರಿಸುತ್ತಿರುವ ಅಕ್ಕಿ ಮತ್ತು ತೊಗರಿ ಬೇಳೆ ಪಡೆದುಕೊಳ್ಳಲು ಜನರು ಪರದಾಟ ನಡೆಸುತ್ತಿರುವ ದೃಶ್ಯ ಕಂಡು ಬಂದಿತು.
ಪಡಿತರ ಪಡೆಯಲು ಫಲಾನುಭವಿಗಳ ಪರದಾಟ: ಮಾರ್ಕ್ನಲ್ಲಿ ಚೀಲ ಇಟ್ಟು ನೆರಳಿನಲ್ಲಿ ಆಶ್ರಯ ಪಡೆದ ಜನ! - gangavti latest news
ಗಂಗಾವತಿ ನಗರದಲ್ಲಿ ಪ್ರತಿ ವ್ಯಕ್ತಿಗೆ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ಹಾಗೂ ಕಾರ್ಡ್ ಒಂದಕ್ಕೆ ಒಂದು ಕೆಜಿ ತೊಗರಿ ಬೇಳೆಯನ್ನು ಸರ್ಕಾರ ವಿತರಿಸುತ್ತಿದೆ. ಇದನ್ನು ಪಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಡ್ಡಾಯ ನಿಯಮವಿದೆ. ಫಲಾನುಭವಿಗಳು ವಿಪರೀತ ಬಿಸಿಲಿನಿಂದಾಗಿ ಮಾರ್ಕ್ ಮಾಡಿದ ಸ್ಥಳ ಬಿಟ್ಟು ಚೀಲಗಳನ್ನು ಬಾಕ್ಸ್ಗಳಲ್ಲಿ ಇಟ್ಟು ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
![ಪಡಿತರ ಪಡೆಯಲು ಫಲಾನುಭವಿಗಳ ಪರದಾಟ: ಮಾರ್ಕ್ನಲ್ಲಿ ಚೀಲ ಇಟ್ಟು ನೆರಳಿನಲ್ಲಿ ಆಶ್ರಯ ಪಡೆದ ಜನ! benifishers struggling for taking ration in gangavati](https://etvbharatimages.akamaized.net/etvbharat/prod-images/768-512-7014689-1022-7014689-1588330282951.jpg)
ಪಡಿತರ ಪಡೆಯಲು ಫಲಾನುಭವಿಗಳ ಪರದಾಟ
ಪ್ರತಿ ವ್ಯಕ್ತಿಗೆ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ಹಾಗೂ ಕಾರ್ಡ್ ಒಂದಕ್ಕೆ ಒಂದು ಕೆಜಿ ತೊಗರಿ ಬೇಳೆಯನ್ನು ಸರ್ಕಾರ ವಿತರಿಸುತ್ತಿದೆ. ಇದನ್ನು ಪಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಡ್ಡಾಯ ನಿಯಮವಿದೆ. ವಿಪರೀತ ಬಿಸಿಲಿನಿಂದಾಗಿ ಫಲಾನುಭವಿಗಳು ಮಾರ್ಕ್ ಮಾಡಿದ ಸ್ಥಳ ಬಿಟ್ಟು ಚೀಲಗಳನ್ನು ಅಲ್ಲಿಟ್ಟು ನೆರಳಿನಲ್ಲಿ ಗುಂಪು ಗುಂಪಾಗಿ ಆಶ್ರಯ ಪಡೆದಿದ್ದರು.
ಪಡಿತರ ಪಡೆಯಲು ಫಲಾನುಭವಿಗಳ ಪರದಾಟ
ಪಡಿತರ ಪಡೆಯಲು ಆಗಮಿಸುವ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಕನಿಷ್ಠ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡದಿರುವುದು ಕಂಡು ಬಂತು.