ಗಂಗಾವತಿ: ಕಳೆದ ಎರಡು ಮೂರು ತಿಂಗಳಿಂದ ಸಕಾಲಕ್ಕೆ ಮಾಸಾಶನ ಸಿಗದೆ ಫಲಾನುಭವಿಗಳು ಪರದಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
ಹಣಕ್ಕಾಗಿ ಮಾಸಾಶನ ಫಲಾನುಭವಿಗಳ ಪರದಾಟ - koppal district news
ಮಾಸಾಶನ ಸಿಗದೆ ಫಲಾನುಭವಿಗಳು ಪರದಾಡುವಂತಹ ಪರಿಸ್ಥತಿ ನಗರದಲ್ಲಿ ನಿರ್ಮಾಣವಾಗಿದೆ. ಉಪ ಖಜಾನೆಯಲ್ಲಿದ್ದ ಬಹುತೇಕ ಖಾತೆಗಳನ್ನು ಜಿಲ್ಲಾ ಖಜಾನೆಗೆ ವರ್ಗಾಯಿಸಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಎರಡು ತಿಂಗಳಿಂದ ಫಲಾನುಭವಿಗಳಿಗೆ ಹಣ ಸಿಕ್ಕಿರಲಿಲ್ಲ. ಇದೀಗ ಎರಡು ತಿಂಗಳ ಹಣ ಬಿಡುಗಡೆಯಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ.
ಸರಿಯಾದ ಸಮಯಕ್ಕೆ ಮಾಸಾಶನ ಸಿಗದೆ ಫಲಾನುಭವಿಗಳು ಪರದಾಡುವಂತಹ ಪರಿಸ್ಥತಿ ಗಂಗಾವತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಉಪ ಖಜಾನೆಯಲ್ಲಿದ್ದ ಬಹುತೇಕ ಖಾತೆಗಳನ್ನು ಜಿಲ್ಲಾ ಖಜಾನೆಗೆ ವರ್ಗಾಯಿಸಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಎರಡು ತಿಂಗಳಿಂದ ಫಲಾನುಭವಿಗಳಿಗೆ ಹಣ ಸಿಕ್ಕಿರಲಿಲ್ಲ. ಇದೀಗ ಎರಡು ತಿಂಗಳ ಹಣ ಬಿಡುಗಡೆಯಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಆದರೆ ಅನಕ್ಷರಸ್ಥರು ತಮ್ಮ ಖಾತೆಯಿಂದ ಹಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಥ್ ಡ್ರಾ ಫಾರಂನಲ್ಲಿ ಮಾಹಿತಿ ತುಂಬಿ ಕೌಂಟರ್ನಲ್ಲಿ ನೀಡಿದರೆ ಮಾತ್ರ ಅಂಚೆ ಸಿಬ್ಬಂದಿ ಹಣ ನೀಡುತ್ತಿದ್ದಾರೆ. ಆದರೆ ಅಕ್ಷರ ಜ್ಞಾನವಿಲ್ಲದ ಫಲಾನುಭವಿಗಳು ಅಂಚೆ ಕಚೇರಿಗೆ ಮುಗಿಬೀಳುತ್ತಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಅಂಚೆ ಇಲಾಖೆ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿ ತಾತ್ಕಾಲಿಕವಾಗಿ ಫಲಾನುಭವಿಗಳು ಹಣ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.