ಕೊಪ್ಪಳ:ಭೂರಹಿತ ಅಲೆಮಾರಿ ಸಮುದಾಯದ ಅರ್ಹರ ಬದುಕಿಗಾಗಿ ಸರ್ಕಾರ ಭೂಮಿ ಖರೀದಿಸಿ ನೀಡುತ್ತಿದೆ. ಫಲಾನುಭವಿಗಳು ಸರ್ಕಾರದ ನಿಬಂಧನೆಗಳನ್ನು ಪಾಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಫಲಾನುಭವಿಗಳು ಸರ್ಕಾರದ ನಿಬಂಧನೆಗಳನ್ನು ಪಾಲಿಸಬೇಕು.. ಡಿಸಿ ಖಡಕ್ ಸೂಚನೆ - ಭೂಮಾಲೀಕರ ಭೂಮಿಗೆ ದರ ನಿಗದಿ
ಭೂರಹಿತ ಅಲೆಮಾರಿ ಸಮುದಾಯದ ಫಲಾನುಭವಿಗಳು ಸರ್ಕಾರ ಭೂಮಿ ಪಡೆಯುವಾಗ ಸರ್ಕಾರದ ನಿಬಂಧನೆಗಳನ್ನು ಪಾಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಫಲಾನುಭವಿಗಳ ಎದುರೇ ಭೂಮಾಲೀಕರ ಭೂಮಿಗೆ ದರ ನಿಗದಿಯ ಸಭೆಯಲ್ಲಿ ಡಿಸಿ ಪಿ.ಸುನೀಲ್‌ಕುಮಾರ್ ಅವರು ಫಲಾನುಭವಿಗಳಿಗೆ ಖಡಕ್ ಸೂಚನೆ ನೀಡಿದರು. ಭೂರಹಿತ ಅಲೆಮಾರಿ ಸಮುದಾಯದ ಅರ್ಹ ಕುಟುಂಬಕ್ಕೆ ಸರ್ಕಾರ ಭೂಮಿ ನೀಡುತ್ತಿದೆ. ಇದು ಅವರ ಬದುಕಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ. ಇದಕ್ಕೆ ಹಲವು ನಿಬಂಧನೆಗಳು ಇವೆ. ಭೂಮಿ ಪಡೆದ ಫಲಾನುಭವಿಗಳು ಬೇರೆಯವರಿಗೆ ಪರಭಾರೆ ಮಾಡಬಾರದು. ಸರಿಯಾದ ರೀತಿಯಲ್ಲಿ ಉತ್ತಿ, ಬಿತ್ತಿ ಬೆಳೆಯಿರಿ ಎಂದು ಸೂಚಿಸಿದ್ರು.
ಆದಷ್ಟು ಬೇಗ ಸರ್ಕಾರದಿಂದ ಅನುಮೋದನೆ ಪಡೆದು ಫಲಾನುಭವಿಗಳ ಹೆಸರಿಗೆ ಭೂಮಿಯನ್ನು ರಿಜಿಸ್ಟ್ರಾರ್ ಮಾಡಿಕೊಡಲಾಗುತ್ತದೆ ಎಂದರು. ಇನ್ನು ಭೂಮಾಲೀಕರಿಗೂ ಈ ಸಂದರ್ಭದಲ್ಲಿ ಖಡಕ್ ಎಚ್ಚರಿಕೆ ರವಾನಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರು, ನಾನು ಇಲ್ಲಿ ನಿಮ್ಮ ಮುಖಂಡರು ಹೇಳಿದ ದರಕ್ಕೆ ರೇಟ್ ಫಿಕ್ಸ್ ಮಾಡಲು ಕುಳಿತಿಲ್ಲ. ಸರ್ಕಾರದ ನಿಯಮದ ಪ್ರಕಾರ ಯಾವ ಯಾವ ಪ್ರದೇಶದಲ್ಲಿ ಸರ್ಕಾರಿ ದರವಿದೆಯೋ ಆ ನಿಯಮದಂತೆ ದರ ಫಿಕ್ಸ್ ಮಾಡುತ್ತೇವೆ. ಸರ್ಕಾರದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ಸರ್ಕಾರದ ಹಣವನ್ನು ಬಳಕೆ ಮಾಡೋದಕ್ಕೇನೆ ಅಧಿಕಾರಿಗಳು ಇರುವುದು ಎಂದರು. ಜಿಲ್ಲಾ ಪಂಚಾಯತ್ ಸಿಇಓ ರಘುನಂದನಮೂರ್ತಿ ಸೇರಿದಂತೆ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.