ಗಂಗಾವತಿ:ಶ್ರೀ ಕ್ಷೇತ್ರಅಂಜನಾದ್ರಿಯ ಆಂಜನೇಯನಿಗೆ ಇದೀಗ ಶ್ರೀಕೃಷ್ಣನ ಜನ್ಮಭೂಮಿ ಮಥುರಾದ ಸಾಧು ಸಂತರು 225 ಕೆಜಿಯ ಹಿತ್ತಾಳೆ ಘಂಟೆಯೊಂದನ್ನು ದೇಣಿಗೆಯಾಗಿ ನೀಡಿದ್ದಾರೆ. ಮಥುರಾದಿಂದ ವಿಶೇಷ ವಾಹನದಲ್ಲಿ ಇದನ್ನು ತಂದಿದ್ದು ಸ್ಥಳೀಯ ಯುವಕರ ನೆರವಿನೊಂದಿಗೆ ಬೆಟ್ಟದ ಮೇಲಿರುವ ಅಂಜನಾದ್ರಿಯ ದೇಗುಲಕ್ಕೆ ತಲುಪಿಸಲಾಗಿದೆ.
ಸಮುದ್ರ ಮಟ್ಟದಿಂದ 350ಕ್ಕಿಂತ ಹೆಚ್ಚು ಮೀಟರ್ ಎತ್ತರದಲ್ಲಿರುವ ಅಂಜನಾದ್ರಿ ಪರ್ವತಕ್ಕೆ 575ಕ್ಕೂ ಹೆಚ್ಚು ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳ ಮೂಲಕ ಬೃಹತ್ ಘಂಟೆಯನ್ನು ಹೊತ್ತೊಯ್ಯುವುದು ಸುಲಭದ ಕಾರ್ಯವಾಗಿರಲಿಲ್ಲ. ಸಾಧುಗಳು ಪರ್ಯಾಯ ರಸ್ತೆಯ ಮೂಲಕ ಬೆಟ್ಟ ಹತ್ತಿದರು.
ಇದನ್ನೂ ಓದಿ:ರೈತರು ರಾಶಿ ಹಾಕಿದ್ದ ಬೆಳೆ ಮಳೆ ಪಾಲು: ಎಪಿಎಂಸಿ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ
ಚಿಕ್ಕರಾಂಪೂರಕ್ಕೆ ಹೋಗುವ ಮಾರ್ಗ ಮಧ್ಯೆ ಬರುವ ಸಂಸ್ಕೃತ ವೇದಪಾಠ ಶಾಲೆಯ ಬಳಿ ಇರುವ ಕಾಲುದಾರಿ ಮೂಲಕ ಘಂಟೆಯನ್ನು ಬೆಟ್ಟದ ಮೇಲ್ಭಾಗಕ್ಕೆ ತಲುಪಿಸಲಾಯಿತು. ಸುಮಾರು ಹತ್ತಕ್ಕೂ ಹೆಚ್ಚು ಯುವಕರು ಕಬ್ಬಿಣದ ರಾಡುಗಳಿಗೆ ಘಂಟೆಯನ್ನು ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟ ಏರಿದರು.
ಇದನ್ನೂ ಓದಿ:ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು