ಗಂಗಾವತಿ:ಪ್ರಸ್ತಕ ಸಾಲಿನಲ್ಲಿ ನಗರದಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 556 ಮಕ್ಕಳು ಮಾತೃಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಸೆ.21ರಿಂದ ಪೂರಕ ಪರೀಕ್ಷೆಗಳು ಆರಂಭವಾಗಲಿವೆ.
ಗಂಗಾವತಿ: ಮಾತೃಭಾಷೆಯಲ್ಲಿ 456 ವಿದ್ಯಾರ್ಥಿಗಳು ಫೇಲ್... ಸೆ.21ರಿಂದ SSLC ಪೂರಕ ಪರೀಕ್ಷೆ - ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ
ಪ್ರಸ್ತಕ ಸಾಲಿನಲ್ಲಿ ನಗರದಲ್ಲಿ 10ನೇ ತರಗತಿ ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 556 ಮಕ್ಕಳು ಮಾತೃಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಸೆ.21ರಿಂದ ಪೂರಕ ಪರೀಕ್ಷೆಗಳು ಆರಂಭವಾಗಲಿವೆ.
ಪರೀಕ್ಷೆ ಆರಂಭ
ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 6,818 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2,134 ಮಕ್ಕಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಸಾಮಾಜಿಕ ವಿಜ್ಞಾನ 689, ಗಣಿತ 1,304, ಇಂಗ್ಲೀಷ್ 941, ಹಿಂದಿ 324 ಹಾಗೂ ವಿಜ್ಞಾನ 1,042 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲಿದ್ದಾರೆ.
ನಗರದಲ್ಲಿ ಪೂರಕ ಪರೀಕ್ಷೆಗಾಗಿ ಎಂಟು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಶಿಕ್ಷಣ ಇಲಾಖೆ ಬಹುತೇಕ ಸಿದ್ಧತೆಗಳನ್ನು ಮಾಡಿಕೊಂಡಿದೆ.