ಕುಷ್ಟಗಿ (ಕೊಪ್ಪಳ): ಜೇನು ನೊಣಗಳು ಸಾಮಾನ್ಯವಾಗಿ ಗಿಡ, ಮರ, ಪೊದೆ, ಹುತ್ತ, ಮನುಷ್ಯನ ಕೈಗೆ ಸಿಗದಂತೆ ಕಟ್ಟಡದ ಅಪಾಯಕಾರಿ ಭಾಗಗಳು ಹಾಗು ನಿರ್ಜನ ಪ್ರದೇಶದಲ್ಲಿ ಗೂಡು ಕಟ್ಟುವುದುಂಟು. ಆದರೆ, ಇಲ್ಲೊಂದು ಜೇನುಗೂಡು ಸಂತೆಯ ಪ್ರದೇಶದಲ್ಲಿನ ಗೂಡ್ಸ್ ವಾಹನದಲ್ಲಿ ಗೂಡು ಕಟ್ಟಿ ವಾಸವಾಗಿರುವುದು ವಿಸ್ಮಯ ತರಿಸಿದೆ.
ಚಲಿಸುವ ಗೂಡ್ಸ್ ವಾಹನದಲ್ಲಿ ಜೇನುಗೂಡು! ವಿಚಿತ್ರವಾದ್ರೂ ಸತ್ಯ - Honey bee
ಕುಷ್ಟಗಿ ಪಟ್ಟಣದ ಹಳೆ ಪ್ರವಾಸಿ ಮಂದಿರದ ಬಳಿಯ ಗೂಡ್ಸ್ ವಾಹನದಲ್ಲಿ ಜೇನು ನೊಣಗಳು ಗೂಡು ಕಟ್ಟುವ ಮೂಲಕ ವಿಸ್ಮಯ ಸೃಷ್ಟಿಸಿವೆ.
ಕುಷ್ಟಗಿ ಪಟ್ಟಣದ ಹಳೆ ಪ್ರವಾಸಿ ಮಂದಿರದ ಎದುರಿಗಿರುವ ಸಯ್ಯದ್ ಹುಸೇನ್ ಪಟ್ಟೇದಾರ್ ಎಂಬುವರ ಗೂಡ್ಸ್ ವಾಹನದಲ್ಲಿ ಜೇನುಗೂಡು ಕಟ್ಟಿದೆ. ಇಲ್ಲಿ ಜೇನುಗೂಡು ಕಟ್ಟಿರುವುದು ವಿಶೇಷವಲ್ಲ. ಆದರೆ, ಗೂಡ್ಸ್ ವಾಹನವನ್ನು ನಿತ್ಯ ಕೋಳಿಗಳನ್ನು ಸರಬರಾಜು ಮಾಡಲು ಉಪಯೋಗಿಸಲಾಗುತ್ತದೆ. ಆದಾಗ್ಯೂ ಕದಲದೇ ಅಲ್ಲಿಯೇ ಉಳಿದುಕೊಂಡಿದೆ. ಒಂದು ತಿಂಗಳಾಗುತ್ತಾ ಬಂದರೂ ಜೇನುಗೂಡು ಹಾಗೆಯೇ ಇರುವುದು ಅಚ್ಚರಿ ತಂದಿದೆ.
'ಈ ಜೇನುಗೂಡು ನಮ್ಮ ವಾಹನದಲ್ಲಿ ಕಟ್ಟಿದಾಗಿನಿಂದ ನಮಗೆ ಒಳಿತಾಗಿದೆ. ಹೀಗಾಗಿ ಅವುಗಳಿಗೆ ನಾವು ತೊಂದರೆ ನೀಡಿಲ್ಲ. ನಿತ್ಯ ಬಾಯ್ಲರ್ ಕೋಳಿಗಳನ್ನು ತರುತ್ತಿದ್ದು, ಚಿಕನ್ ಸೆಂಟರ್ ಬಳಿ ವಾಹನ ನಿಲ್ಲಿಸಲಾಗುತ್ತಿದೆ. ಆದರೂ ಜೇನು ನೊಣಗಳು ಕದಲಿಲ್ಲ. ಅವುಗಳಿಗೆ ನಮ್ಮ ಬಗ್ಗೆ ವಿಶ್ವಾಸ ಮೂಡಿದೆ ಎನ್ನುತ್ತಾರೆ' ಗೂಡ್ಸ್ ವಾಹನದ ಮಾಲೀಕ ಸಯ್ಯದ್ ಹುಸೇನ್ ಪಟ್ಟೇದಾರ್.