ಗಂಗಾವತಿ: ತಾಲೂಕಿನ ಐತಿಹಾಸಿ ಹಾಗೂ ಧಾರ್ಮಿಕ ತಾಣ ಅಂಜನಾದ್ರಿ ದೇಗುಲದ ವಿವಾದ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲಿಯೇ, ತಾಲೂಕಿನ ಮತ್ತೊಂದು ಪೌರಾಣಿಕ ಸ್ಥಳ ಪಂಪಾಸರೋವರದಲ್ಲಿರುವ ಶಬರಿ ಗುಹೆಗೆ ಜಾಂಬವಂತ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾನೆ.
ಗಂಗಾವತಿಯ ನಗರದಲ್ಲಿ ಭಾನುವಾರವಷ್ಟೆ ಪ್ರತ್ಯಕ್ಷವಾಗಿದ್ದ ಕರಡಿ, ಇದೀಗ ಪಂಪಾಸರೋವರದ ಲಕ್ಷ್ಮಿ ದೇಗುಲದ ಆವರಣದಲ್ಲಿ ಕಾಣಿಸಿದ್ದು, ಅಲ್ಲಿನ ಪೂಜಾರಿಗಳು ಹಾಗೂ ದೇಗುಲದ ಸಿಬ್ಬಂದಿಯಲ್ಲಿ ನಡುಕಕ್ಕೆ ಕಾರಣವಾಗಿದೆ.
ಅಂಜನಾದ್ರಿ ವಿವಾದದ ಬೆನ್ನಲ್ಲೆ ಶಬರಿ ಗುಹೆಗೆ ಬಂದ ಜಾಂಬವಂತ ದೊಡ್ಡ ಗಾತ್ರದ ಕರಡಿಯೊಂದು ಸರೋವರದ ಭಾಗದಿಂದ ಆಗಮಿಸಿ, ಲಕ್ಷ್ಮಿ ದೇಗುಲದ ಕಟ್ಟೆ ಹತ್ತುವ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕರಡಿಯನ್ನು ನೋಡಿದ ಅಲ್ಲಿನ ಸಿಬ್ಬಂದಿ ಎದ್ದುಬಿದ್ದು ಓಡಿ ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೊಡ್ಡ ಗಾತ್ರದ ಕರಡಿಯೊಂದು ಸರೋವರದ ಭಾಗದಿಂದ ಆಗಮಿಸಿ, ಲಕ್ಷ್ಮಿ ದೇಗುಲದ ಕಟ್ಟೆ ಹತ್ತುವ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕರಡಿಯನ್ನು ನೋಡಿದ ಅಲ್ಲಿನ ಸಿಬ್ಬಂದಿ ಎದ್ದು ಬಿದ್ದು ಓಡಿಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.