ಕೊಪ್ಪಳ: ಹೊಲದಲ್ಲಿ ಮಲಗಿದ್ದ ಇಬ್ಬರು ರೈತರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕರಡಿ ದಾಳಿ : ಇಬ್ಬರು ರೈತರಿಗೆ ಗಾಯ - ಕರಡಿ ದಾಳಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದಲ್ಲಿ ಇಬ್ಬರು ರೈತರ ಮೇಲೆ ಕರಡಿ ದಾಳಿ ನಡೆಸಿದೆ. ದಾಳಿಯಿಂದ ಗಾಯಗೊಂಡಿರುವ ಗಾಯಾಳುಗಳಿಬ್ಬರು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ..
ಬಂಡ್ರಾಳ ಗ್ರಾಮದ ದುರುಗಪತಪ ಜಲ್ಲಿ ಹಾಗೂ ಮಲ್ಲಪ್ಪ ಎಂಬುವರ ಮೇಲೆ ಕರಡಿ ದಾಳಿ ನಡೆಸಿದೆ. ಈ ಇಬ್ಬರು ನಿನ್ನೆ ರಾತ್ರಿ ಜಮೀನಿನಲ್ಲಿದ್ದ ಮೆಕ್ಕೆಜೋಳದ ರಾಶಿಯನ್ನು ಕಾಯಲೆ ಎಂದು ಹೋಗಿದ್ದರು. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಕರಡಿ ಬಂದು ದಾಳಿ ನಡೆಸಿದೆ. ಒಬ್ಬರ ಕಾಲು, ತಲೆಗೆ ಗಾಯವಾಗಿದೆ. ಕರಡಿ ದಾಳಿಯಿಂದ ಗಾಯಗೊಂಡಿರುವ ಗಾಯಾಳುಗಳಿಬ್ಬರು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬಂಡ್ರಾಳ ಗ್ರಾಮದ ಸುತ್ತಮುತ್ತ ಕರಡಿಗಳು ಇವೆ. ಇದರಿಂದ ಜನರು ಆತಂಕದಲ್ಲಿ ಜೀವನ ನಡೆಸಬೇಕಿದೆ. ಕರಡಿ ಉಪಟಳ ತಡೆಯಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಂಡ್ರಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.