ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಕರಡಿ ದಾಳಿ: ರೈತನಿಗೆ ಗಂಭೀರ ಗಾಯ - undefined

ಗಂಗಾವತಿ ನಗರದ ಹೊರವಲಯದಲ್ಲಿರುವ ವಿಪ್ರ ದ್ಯಾವಮ್ಮನ ದೇವಸ್ಥಾನದ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದೆ.

ಗಾಯಗೊಂಡ ರೈತನಿಗೆ ಚಿಕ್ಸಿತ್ಸೆ ನೀಡುತ್ತಿರುವುದು

By

Published : Jul 12, 2019, 12:52 PM IST

Updated : Jul 12, 2019, 1:52 PM IST

ಕೊಪ್ಪಳ:ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿರುವ ವಿಪ್ರ ದ್ಯಾವಮ್ಮನ ದೇವಸ್ಥಾನದ ಬಳಿ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿದೆ.

ಗಂಗಾವತಿಯ ರೈತ ಶರಣಪ್ಪ ಎಂಬುವರ ಮೇಲೆ ಎರಗಿದ್ದ ಕರಡಿ, ದೇಹದ ತುಂಬೆಲ್ಲಾ ಕಚ್ಚಿ ಗಾಯಗೊಳಿಸಿದೆ. ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಜಾಂಭವ ದಾಳಿ ನಡೆಸಿದೆ. ಇನ್ನು ಇದೇ ಕರಡಿ ರಾಮಣ್ಣ ಎಂಬುವರ ಮೇಲೂ ದಾಳಿ ಮಾಡಿತ್ತು ಎನ್ನಲಾಗ್ತಿದೆ.

ಗಾಯಗೊಂಡ ರೈತನಿಗೆ ಚಿಕಿತ್ಸೆ ನೀಡುತ್ತಿರುವುದು

ಗಂಭೀರವಾಗಿ ಗಾಯಗೊಂಡಿರುವ ಶರಣಪ್ಪ ಅವರು ಗಂಗಾವತಿ ಉಪ-ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Last Updated : Jul 12, 2019, 1:52 PM IST

For All Latest Updates

TAGGED:

ABOUT THE AUTHOR

...view details