ಕೊಪ್ಪಳ:ನಗರದ ದೇವರಾಜ ಅರಸು ಬಿಸಿಎಂ ಹಾಸ್ಟಲ್ನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಐದು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಹಿನ್ನೆಲೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ಹಾಸ್ಟೆಲ್ಗಳ ಮೂಲಸೌಕರ್ಯ, ಸುರಕ್ಷತಾ ಕ್ರಮಗಳ ಕುರಿತು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಬಿಸಿಎಂ ಹಾಸ್ಟೆಲ್ ಪ್ರಕರಣ: ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಕುರಿತು ವಿವರಣೆ ಕೇಳಿದ ಹೈಕೋರ್ಟ್
ನಗರದ ದೇವರಾಜ ಅರಸು ಬಿಸಿಎಂ ಹಾಸ್ಟಲ್ನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಐದು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಹಿನ್ನೆಲೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ಹಾಸ್ಟೆಲ್ಗಳ ಮೂಲಸೌಕರ್ಯ, ಸುರಕ್ಷತಾ ಕ್ರಮಗಳ ಕುರಿತು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಹಾಸ್ಟೆಲ್ಗಳ ಮಂಜೂರಾತಿ, ನಿರ್ವಹಣೆ, ಹಾಸ್ಟೆಲ್ ನಡೆಸಲು ಬಾಡಿಗೆ ಕಟ್ಟಡಗಳು, ವಿದ್ಯಾರ್ಥಿಗಳ ಪ್ರವೇಶ ಮಿತಿಗೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿಗಳೇನು?, ಅಂತಹ ಮಾರ್ಗಸೂಚಿಗಳು ಅಸ್ತಿತ್ವದಲ್ಲಿದ್ದರೆ ಅದರ ವಿವರಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಮಾರ್ಗಸೂಚಿ ರೂಪಿಸಲು ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ದುರ್ಘಟನೆ ಸಂಭವಿಸಿದ ಹಾಸ್ಟೆಲ್ ಬಾಡಿಗೆಯದಾಗಿತ್ತು, ಸ್ವಾತ್ಂತ್ರ್ಯ ದಿನಾಚರಣೆ ಮುಗಿದ ನಂತರ ಅಲ್ಲಿ ನೀಡಲಾಗಿದ್ದ ಕಂಬವನ್ನು ತೆರವುಗೊಳಿಸುವ ಸಮಯದಲ್ಲಿ, ಒಬ್ಬ ಯುವಕನಿಗೆ ವಿದ್ಯುತ್ ಸ್ಪರ್ಶಿಸಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುವಂತಹ ಸಂದರ್ಭದಲ್ಲಿ ಉಳಿದ ನಾಲ್ವರು ಆತನ ರಕ್ಷಣೆಗೆ ಮುಂದಾಗಿ ಒಟ್ಟು ಐದು ಮಂದಿ ವಿಧಿಯಾಟಕ್ಕೆ ಬಲಿಯಾಗಿದ್ದರು.