ಕೊಪ್ಪಳ: ಸ್ವಾಭಿಮಾನದಿಂದ ಬದುಕಲಾಗದ ಸನ್ನಿವೇಶದ ಸ್ಥಿತಿಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಡಿಗಳಲ್ಲ. ಒಬ್ಬ ಕೃಷಿ ಸಚಿವರಾಗಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿ.ಸಿ.ಪಾಟೀಲ್ ರೈತರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ಇಂದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಬೆಲೆ ಕುಸಿತ ಕಂಡಾಗ ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಸರ್ಕಾರ ಖರೀದಿಸಿ ರೈತರಿರೆ ಸಪೋರ್ಟ್ ಮಾಡೋದಿಲ್ಲ. ಸಾಲ ಮಾಡಿ ರೈತರು ಬೆಳೆ ಬೆಳೆದಿರುತ್ತಾರೆ. ಬೆಳೆ ಕುಸಿತವಾದ ಸಂದರ್ಭದಲ್ಲಿ ಸಾಲ ತೀರಿಸಲಾಗದೆ, ಸ್ವಾಭಿಮಾನದಿಂದ ಬದುಕಲೂ ಆಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಡಿಗಳು ಎಂದು ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ಒಬ್ಬ ಕೃಷಿ ಸಚಿವರಾಗಿ ಆ ರೀತಿ ಮಾತನಾಡಬಾರದು. ಕೂಡಲೇ ಅವರು ರೈತರ ಕ್ಷಮೆ ಕೇಳಬೇಕು ಎಂದರು.